ADVERTISEMENT

ಹಾಸನ: 187 ಮಂದಿಗೆ ಕೊರೊನಾ ಪಾಸಿಟವ್‌

45 ಮಂದಿ ಬಿಡುಗಡೆ, ಸೋಂಕಿತರ ಸಂಖ್ಯೆ 2735 ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 15:09 IST
Last Updated 4 ಆಗಸ್ಟ್ 2020, 15:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಸನ: ಜಿಲ್ಲೆಯಲ್ಲಿ ಮಂಗಳವಾರ ಹೊಸದಾಗಿ 187 ಕೋವಿಡ್‌ ಪ್ರಕರಣಗಳು ದೃಢಪಟ್ಟಿದ್ದು, ಮೂವರು ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 2735 ಕ್ಕೆ ಏರಿಕೆಯಾಗಿದೆ.

ಚೇತರಿಸಿಕೊಂಡ 45 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ವರೆಗೆ 1102 ಮಂದಿ ಗುಣಮುಖರಾಗಿದ್ದಾರೆ. 1560 ಸಕ್ರಿಯ ಪ್ರಕರಣಗಳಿವೆ. 45 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‌ಹೊಸದಾಗಿ ಅರಸೀಕೆರೆ ತಾಲ್ಲೂಕು 5, ಚನ್ನರಾಯಪಟ್ಟಣ 19, ಹಾಸನ 116, ಹೊಳೆನರಸೀಪುರ 17, ಅರಕಲಗೂಡು 9, ಬೇಲೂರು 12, ಸಕಲೇಶಪುರ 6 ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಹದಿನೈದು ಮಂದಿ ಆರೋಗ್ಯ ಸಹಾಯಕರಿಗೆ, ಅನ್ಯ ಜಿಲ್ಲೆ ಪ್ರಯಾಣ ಇತಿಹಾಸ ಹೊಂದಿದವರಿಗೆ ಹಾಗೂ ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ ನೂರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ.

ADVERTISEMENT

ಆಗಸ್ಟ್ 2ರಂದು ಆತ್ಮಹತ್ಯೆಗೆ ಶರಣಾಗಿದ್ದ ಚನ್ನರಾಯಪಟ್ಟಣ ತಾಲ್ಲೂಕಿನ 24 ವರ್ಷದ ಮಹಿಳೆ ಹಾಗೂ ಮೂರು ವರ್ಷದ ಪುತ್ರಿಗೆ ಮರಣೋತ್ತರ ಪರೀಕ್ಷೆಯಲ್ಲಿ ಕೊರೊನಾ ದೃಢಪಟ್ಟಿದೆ. ಅದೇ ತಾಲ್ಲೂಕಿನ 44 ವರ್ಷದ ಪುರುಷ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಇದರೊಂದಿಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 73 ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.