ADVERTISEMENT

ಗಾಂಜಾ ಮಾರಾಟ: ಐವರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 16:52 IST
Last Updated 9 ಸೆಪ್ಟೆಂಬರ್ 2020, 16:52 IST
ಬೇಲೂರು ಪಟ್ಟಣದ ಬದ್ರಿಯಾ  ಸಾಮೀಲ್ ಹಿಂಭಾಗ ಗಾಂಜಾ ಸೇವನೆ ಮತ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದರು.
ಬೇಲೂರು ಪಟ್ಟಣದ ಬದ್ರಿಯಾ  ಸಾಮೀಲ್ ಹಿಂಭಾಗ ಗಾಂಜಾ ಸೇವನೆ ಮತ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದರು.   

ಬೇಲೂರು: ಗಾಂಜಾ ಸೇವನೆ ಹಾಗೂ ಮಾರಾಟ ಮಾಡಲು ಯತ್ನಿಸುತ್ತಿದ್ದ5 ಜನರನ್ನು ಬೇಲೂರು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪಟ್ಟಣದ ಬದ್ರಿಯಾ ಸಾಮೀಲ್ ಹಿಂಭಾಗ ಗಾಂಜಾ ಸೇವನೆ ಹಾಗೂ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆಎಂಬ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಬೇಲೂರು ಪೊಲೀಸರ ತಂಡ, ಐವರು ಆರೋಪಿಗಳಾದ ಚಿಕ್ಕಮಗಳೂರಿನ ಮೊಹಿನುದ್ದೀನ್, ಬೇಲೂರು ಪಟ್ಟಣದ ತಸ್ಲೀಮ್ ಪಾಷಾ, ಇಸ್ಮಾಯಿಲ್, ಹಳೇಬೀಡು ರಸ್ತೆಯ ಸಂತು ಹಾಗೂ ಹೆಬ್ಬಾಳು ಗ್ರಾಮದ ಚಂದ್ರಪ್ಪ ಎಂಬುವವರನ್ನು ಬಂಧಿಸಿ ಅವರಿಂದ 350 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ತಹಶೀಲ್ದಾರ್ ನಟೇಶ್, ಪಿಎಸ್‍ಐ ಅಜಯ್‍ಕುಮಾರ್, ಎಎಸ್‍ಐ ನಾಗರಾಜ್, ಸಿಬ್ಬಂದಿ ಮನು, ಚಿತ್ರೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.