ಅರಕಲಗೂಡು: ಇಲ್ಲಿನ ಕೋಟೆ ಕೋದಂಡರಾಮ ದೇವಾಲಯದ ಕಳಶ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದ ಪ್ರಯುಕ್ತ ವಿವಿಧ ಹೋಮ, ಕುಂಬಾಭಿಷೇಕ ನಡೆದವು.
ದೇವಾಲಯದಲ್ಲಿ ಭಾನುವಾರ ರಾತ್ರಿ ವಾಸ್ತು ಹೋಮ, ಅಂಗಹೋಮ, ಅಧಿವಾಸ ಹೋಮ ನಡೆಸಿ ಕಳಶಾಭಿಷೇಕ ನಡೆಸಿ ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಸೋಮವಾರ ಬೆಳಿಗ್ಗೆ ಮೂಲ ವಿಗ್ರಹಗಳಿಗೆ ಪಂಚಾಮೃತ ಅಭಿಷೇಕ, ನಡೆಸಿ ವಿವಿಧ ಪೂಜಾ ಕೈಂಕರ್ಯಗಳನ್ನು ನೇರವೇರಿಸಲಾಯಿತು.
ಮಹಾಗಣಪತಿ, ರಾಮತಾರಕ, ಪಂಚಸೂಕ್ತ, ವಿಮಾನಾಂಗ, ನವಗ್ರಹ, ದುರ್ಗಾ, ರುದ್ರಹೋಮಗಳನ್ನು ನಡೆಸಿ ಪೂರ್ಣಾಹುತಿ ನಡೆಸಿ ದೇವರ ಮೂರ್ತಿಗಳಿಗೆ ಹಾಗೂ ನೂತನ ಕಳಶಕ್ಕೆ ಕುಂಬಾಭಿಷೇಕ ನಡೆಸಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಅರ್ಚಕರಾದ ಶ್ರೀಧರ್ ಭಟ್, ಶ್ರೀಕಾಂತ್ ಭಟ್, ಎ.ಆರ್. ಹರಿಭಟ್, ಎ.ಆರ್. ರವೀಶ್, ಮಂಜುನಾಥ್ ಭಟ್ ಪೂಜಾ ಕಾರ್ಯಗಳನ್ನು ನೆಡೆಸಿದರು.
ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಎ.ಎಸ್. ರಾಮಸ್ವಾಮಿ, ಕಾರ್ಯದರ್ಶಿ ಎ. ಎನ್. ಗಣೇಶಮೂರ್ತಿ, ಕಾರೋನೇಷನ್ ಸಹಕಾರ ಸಂಘದ ಅಧ್ಯಕ್ಷ ಎ.ಆರ್. ಸುಬ್ಬರಾವ್, ನಿರ್ದೇಶಕ ಕೆ.ಎಸ್. ವೆಂಕಟೇಶಮೂರ್ತಿ, ನಿವೃತ್ತ ಶಿಕ್ಷಕರಾದ ಬಿ.ಎನ್. ಸತ್ಯನಾರಾಯಣ್, ರಾಮಕೃಷ್ಣ ಭಟ್, ಬ್ರಾಹ್ಮಣ ಸಮುದಾಯ ಭವನದ ಖಜಾಂಚಿ ಜಿ.ರಮೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.