
ಅರಸೀಕೆರೆ: ತಾಲ್ಲೂಕಿಗೆ ಗಂಗಾ ಕಲ್ಯಾಣ ಯೋಜನೆ ಸೌಲಭ್ಯ ಹೆಚ್ಚಿಗೆ ತರಲು ವಿದ್ಯುತ್ ಅಭಾವದ ನೆಪ ತೊಡಕಾಗಿತ್ತು ಈಗ ಸೆಸ್ಕ್ ಅಧಿಕಾರಿಗಳಿಂದ ಪತ್ರ ಪಡೆದು ಮಾಹಿತಿ ತಿಳಿಸಲಾಗಿದೆ. ಹೆಚ್ಚು ಸಂಖ್ಯೆಯ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆ ನೀಡಲಾಗುವುದು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದದಲ್ಲಿ ಭಾನುವಾರ ಗಂಗಾ ಕಲ್ಯಾಣ ಯೋಜನೆಯ 200 ಫಲಾನುಭವಿಗಳಿಗೆ ಕೊಳವೆ ಬಾವಿ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು.
ರೈತರ ಕೃಷಿ ಕಾರ್ಯಗಳಿಗೆ ಪ್ರಮುಖವಾಗಿ ನೀರು ಹಾಗೂ ಕರೆಂಟ್ ಅತ್ಯವಶ್ಯಕವಾಗಿದೆ.ಕ್ಷೇತ್ರದ ಎಲ್ಲ ಕೆರೆಗಳಿಗೆ ನೀರು ಒದಗಿಸುವ ಕೆಲಸ ಮಾಡುತ್ತಿದ್ದು ವಿದ್ಯುತ್‌ಗಾಗಿ ಸೌರ ವಿದ್ಯುತ್ ಘಟಕ ( ಸೋಲಾರ್ ಪ್ಲಾಂಟ್) ಯೋಜನೆ ಅನುಷ್ಠಾನಕ್ಕೆ ಬರಲಿದೆ. ರೈತರಿಗೆ ಪ್ರತಿ ದಿನನಿತ್ಯ ಬೆಳಿಗ್ಗೆ 9 ರಿಂದ 3 ರವರೆಗೆ ನಿರಂತರ ವಿದ್ಯುತ್ ನೀಡಲಾಗುವುದು. ಇಲ್ಲದವರ ಪಾಲಿಗೆ ಗಂಗಾಕಲ್ಯಾಣ ಯೋಜನೆ ವರದಾನವಾಗಿದೆ. ಎಂದರು.
ಗ್ಯಾರಂಟಿ ಯೋಜನೆಗಳಿಂದ ಬಡವರ ಹಾಗೂ ಮಧ್ಯಮ ವರ್ಗದವರ ಜೀವನವು ಸುಗಮವಾಗಿ ಸಾಗುತ್ತಿದೆ. ₹ 1.10 ಲಕ್ಷ ಕೋಟಿ ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಹಣ ನೀಡಿದ್ದು ಜನರ ಆರ್ಥಿಕ ವೆಚ್ಚ ಕಡಿಮೆಯಾಗಿ ಆದಾಯ ಹೆಚ್ಚಿದೆ ಎಂದರು. ಆದರೂ ವಿರೋಧ ಪಕ್ಷದವರು ಬೆಳಗಾವಿ ಅಧಿವೇಶನದಲ್ಲಿ ಅನಗತ್ಯ ಚರ್ಚೆ ನಡೆಸಿ ಸಮಯವ್ಯಯ ಮಾಡಿದರು ಎಂದು ಟೀಕಿಸಿದರು.
ಗಿಮಿಕ್ ರಾಜಕಾರಣಕ್ಕೆ ಜನ ಮರುಳಾಗಬಾರದು, ಜನರ ಸೇವೆ ಮಾಡುವ ವ್ಯಕ್ತಿಗಳಿಗೆ ಗೆಲುವು ನೀಡಬೇಕು. ಸತತ 4 ಬಾರಿ ಗೆಲುವು ನೀಡಿ ಜನರ ಋಣ ತೀರಿಸುವುದೇ ನನ್ನ ಧ್ಯೇಯ ಎಂದರು.
ಜನರ ಸಮಸ್ಯೆಗಳಿಗೆ ಪಿಡಿಒಗಳ ಸ್ಪಂದನೆ ಬಗ್ಗೆ ಪ್ರತಿ ಜನಸಂಪರ್ಕ ಸಭೆಯಲ್ಲಿ ಚರ್ಚಿಸಲಾಗುವುದು . ಪಂಚಾಯಿತಿಯ ಅಧ್ಯಕ್ಷರು , ಸದಸ್ಯರು ಹಾಗೂ ಮುಖಂಡರುಗಳು ಖುದ್ದು ಹಾಜರಿದ್ದು ಜನಗಳ ಸಮಸ್ಯೆಗಳನ್ನು ಪರಿಹರಿಸಲು ಗಮನವಹಿಸಬೇಕು ಎಂದರು.
ವಿದ್ಯುತ್ ಇಲಾಖಾ ಅಧಿಕಾರಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೇ ಇದ್ದ ಕಾರಣ ಪ್ರಶ್ನೆ ಹಾಕಿದ ಶಾಸಕರು ಕೆಲವೇ ದಿನಗಳಲ್ಲಿ ವಿದ್ಯುತ್ ಇಲಾಖೆ ಅಧಿಕಾರಿಗಳ ಸಭೆ ರೈತರಿಗೆ ಸರಿಯಾಗಿ ವಿದ್ಯುತ್ ನೀಡುವುದು, ಬೋರೆವೆಲ್ ವಿದ್ಯುತ್ ಸಂಪರ್ಕಗಳ ಬಗ್ಗೆ ಮಾಹಿತಿ ಒದಗಿಸಲಾಗುವುದು ಎಂದು ಹೇಳಿದರು.
ಮುಖಂಡರಾದ ಬಿಳಿ ಚೌಡಯ್ಯ , ಗ್ಯಾರಂಟಿ ಯೋಜನೆ ಅನುಷ್ಠಾನ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ , ಮುಖಂಡರಾದ ಚಿಕ್ಕಯರಗನಾಳು ಮಲ್ಲೇಶ್ , ಗುತ್ತಿನಕೆರೆ ಶಿವಮೂರ್ತಿ , ಹರತನಹಳ್ಳಿ ಜಯಣ್ಣ , ಮಂಜುಳಾ ಬಾಯಿ , ಸುಲೋಚನಾ ಬಾಯಿ , ರೈತರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.