ADVERTISEMENT

ಬೇಲೂರು | ತಹಶೀಲ್ದಾರ್ ಕಿರುಕುಳ ಆರೋಪ: ಶಿರಸ್ತೇದಾರ ಆತ್ಮಹತ್ಯೆ ಯತ್ನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 8:15 IST
Last Updated 23 ಜನವರಿ 2026, 8:15 IST
ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಶಿರಸ್ತೇದಾರ್ ತನ್ವೀರ್ ಅಹಮ್ಮದ್ ಅವರಿಗೆ ಚಿಕಿತ್ಸೆ ನೀಡಲಾಯಿತು.
ಬೇಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಶಿರಸ್ತೇದಾರ್ ತನ್ವೀರ್ ಅಹಮ್ಮದ್ ಅವರಿಗೆ ಚಿಕಿತ್ಸೆ ನೀಡಲಾಯಿತು.   

ಬೇಲೂರು (ಹಾಸನ): ‘ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಆರೋಪಿಸಿ ಇಲ್ಲಿನ ತಾಲ್ಲೂಕು ಕಚೇರಿಯ ಶಿರಸ್ತೇದಾರ ತನ್ವೀರ್ ಅಹಮ್ಮದ್ ಅವರು ಗುರುವಾರ ಮಧ್ಯಾಹ್ನ ಮಧುಮೇಹದ ಮಾತ್ರೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರನ್ನು ಸಹೋದ್ಯೋಗಿಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.

‘15 ದಿನಗಳಿಂದ ತಹಶೀಲ್ದಾರ್ ಹೀಯಾಳಿಸಿ ಮಾತನಾಡುತ್ತಿದ್ದಾರೆ. ಅನಾರೋಗ್ಯವಿದೆ ಎಂದರೂ ಜನಗಣತಿ ಮೇಲ್ವಿಚಾರಣೆಯ ಹೆಚ್ಚುವರಿ ಕೆಲಸ ನೀಡಿದ್ದಾರೆ. ನೊಂದು 5 ಮಾತ್ರೆಗಳನ್ನು ಒಟ್ಟಿಗೇ ಸೇವಿಸಿದ್ದೆ’ ಎಂದು ಅವರು ತಿಳಿಸಿದರು.

‘ಬೇರೆ ಸಿಬ್ಬಂದಿಗೂ ಹೆಚ್ಚು ಕೆಲಸವಿದ್ದುದರಿಂದ ಜನಗಣತಿ ವಿಭಾಗದ ಹೊಣೆ ನೀಡಲಾಗಿತ್ತು. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಹೋದರು. ನಾನು ಕಿರುಕುಳ ನೀಡಿಲ್ಲ’ ಎಂದು ತಹಶೀಲ್ದಾರ್‌ ಸ್ಪಷ್ಟಪಡಿಸಿದರು. ‘ಅಹಮ್ಮದ್ ಅವರು ಆರೋಗ್ಯದಿಂದ ಇದ್ದಾರೆ’ ಎಂದು ವೈದ್ಯರು ತಿಳಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.