
ಪ್ರಜಾವಾಣಿ ವಾರ್ತೆ
ಬೇಲೂರು: ಇಲ್ಲಿನ ಜಯಮ್ಮ ಸಿದ್ದೇಗೌಡ ಕನ್ವೆಷನ್ ಹಾಲ್‌ನಲ್ಲಿ ಭಾನುವಾರ ಹಿಂದೂ ಯುವತಿ ಹೇಮಲತಾ ಹಾಗೂ ಇಂಗ್ಲೆಂಡ್‌ನ ಜೋಸೆಫ್ ಹಿಂದೂ ಸಂಪ್ರದಾಯದಂತೆ ವಿವಾಹವಾದರು.
ತಾಲ್ಲೂಕಿನ ಇಬ್ಬೀಡು ಗ್ರಾಮದ ಶಕುಂತಲಾ–ವಿಜಯೇಂದ್ರ ದಂಪತಿಯ ಪುತ್ರಿ ಹೇಮಲತಾ ಹಾಗೂ ಇಂಗ್ಲಂಡ್‌ನ ಲಿವರ್ಪೂಲ್‌ನ ಸೂಜಿ–ಡೇವಿಡ್ ದಂಪತಿ ಪುತ್ರ ಜೋಸೆಫ್ ಪ್ರೀತಿಸಿ ವಿವಾಹವಾದರು.
ಒಂದೂವರೆ ವರ್ಷಗಳ ಹಿಂದೆ ಉದ್ಯೋಗ ಅರಸಿ ಇಂಗ್ಲಂಡ್‌ಗೆ ತೆರಳಿದ್ದ ಹೇಮಲತಾ, ಸಹೋದ್ಯೋಗಿ ಜೋಸೆಫ್ ಅವರನ್ನು ಪ್ರೀತಿಸಿದ್ದು, ಎರಡೂ ಕುಟುಂಬಗಳು ಪರಸ್ಪರ ಒಪ್ಪಿ ಮದುವೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.