ADVERTISEMENT

ಹೆಣ್ಣು ಮಕ್ಕಳ ಸಾಧನೆಗೆ ಪೋಷಕರು ಬೆಂಬಲಿಸಿ’

ಶ್ರವಣಬೆಳಗೊಳದಲ್ಲಿ ಹಿತಾನ್ಯರ ಭರತನಾಟ್ಯ ರಂಗ ಪ್ರವೇಶ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 4:27 IST
Last Updated 21 ಡಿಸೆಂಬರ್ 2025, 4:27 IST
ಶ್ರವಣಬೆಳಗೊಳದ ಆದಿಕವಿ ಪಂಪ ಗ್ರಂಥಾಲಯದಲ್ಲಿ ಕುಮಾರಿ ಹಿತಾನ್ಯ ಬಿ.ವೈ ರ ಭರತ ನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಕ್ಷೇತ್ರದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಗೌರವಿಸಿದ ಸಂದರ್ಭದಲ್ಲಿ ಸ್ವಾತಿ ಪಿ.ಭಾರದ್ವಾಜ್, ರವಿ ನಾಕಲಗೂಡು, ಕಲಾವಿದೆ ಹಿತಾನ್ಯ ಪಾಲ್ಗೊಂಡಿದ್ದರು.

ಶ್ರವಣಬೆಳಗೊಳ: ‘ವಿಶ್ವದಲ್ಲಿಯೇ ವಿಭಿನ್ನ ಸಂಸ್ಕೃತಿ ಪರಂಪರೆಯನ್ನು ಹೊಂದಿರುವ ದೇಶ ನಮ್ಮದು. ಅರಸರ ಆಶರ್ವಿಕೆಯಲ್ಲೂ  ಕಲೆಗಳಿಗೆ ಪ್ರಾಶಸ್ತ್ಯ ನೀಡಿದ್ದರಿಂದ ಸಂಗೀತ , ನಾಟ್ಯ  ಉಳಿದಿವೆ’ ಎಂದು ಜೈನ ಮಠದ   ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಕ್ಷೇತ್ರದ ಆಡಳಿತ ಮಂಡಳಿ ಮತ್ತು ಚನ್ನರಾಯಪಟ್ಟಣದ ನ್ಯಾಷನಲ್ ಕ್ಲಾಸಿಕಲ್ ಡ್ಯಾನ್ಸ್ ಅಕಾಡೆಮಿಯ  ಆಶ್ರಯದಲ್ಲಿ ಶನಿವಾರ ಆದಿಕವಿ ಪಂಪ ಗ್ರಂಥಾಲಯದಲ್ಲಿ ಆಯೋಜಿಸಿದ್ದ  ಹಿತಾನ್ಯ ಬಿ.ವೈ ಅವರ ಭರತನಾಟ್ಯ ರಂಗ ಪ್ರವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಾಗ ಭಾವ ತಾಳಗಳ ಭಾವವೇ ಭರತನಾಟ್ಯವಾಗಿದ್ದು, ಖ್ಯಾತ ವಿಧೂಷಿ ಸ್ವಾತಿ ಪಿ.ಭಾರದ್ವಾಜ ಅವರ ಶಿಷ್ಯೆ, 10 ವರ್ಷದ ಗ್ರಾಮೀಣ ಪ್ರದೇಶದ ಬಾಲ ಕಲಾವಿದೆ ಹಿತಾನ್ಯಾ ಅವರು  ದೇಶವಿದೇಶಗಳಲ್ಲೂ  ಮನ್ನಣೆ ಗಳಿಸಲಿ’ ಎಂದು ಹಾರೈಸಿದರು. ‘ಹೆಣ್ಣು ಮಕ್ಕಳ ಕಲಾ ಸಾಧನೆಗೆ ಪೋಷಕರ ಪ್ರೋತ್ಸಾಹದ ಅಗತ್ಯ ಇದೆ ಎಂದರು. ಒಂದೂವರೆ ಗಂಟೆಗೂ ಹೆಚ್ಚುಕಾಲ ಭರತನಾಟ್ಯ ಪ್ರದರ್ಶಿಸಿದರು. ವಿಧೂಷಿ ಸ್ವಾತಿ ಪಿ. ಭಾರದ್ವಾಜ್ , ರಂಗ ಪ್ರವೇಶ ಮಾಡಿದ ಹಿತಾನ್ಯ , ವಾದ್ಯ ಕಲಾವಿದರಾದ ಅಕ್ಷತಾ ಉಪಾಧ್ಯೆ ,ಕೆ.ಶಶಿಕಲಾ, ರಮ್ಯಾ ಚೇತನ್, ಎಂ.ಕೆ.ವಾಸವಿ ಅವರನ್ನು  ಗೌರವಿಸಿದರು.

ADVERTISEMENT

ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘದ ಸದಸ್ಯ ರವಿ ನಾಕಲಗೂಡು ಮುಖ್ಯ ಅತಿಥಿಯಾಗಿದ್ದರು. . ಕೆಂಪೇಗೌಡ ವೇದಿಕೆಯ ಅಧ್ಯಕ್ಷ ಕಾಳೇನಹಳ್ಳಿ ಆನಂದ್ ಯೋಗೇಶ್, ಪ್ರಸನ್ನ ಪೂರ್ಣಚಂದ್ರ ಶಾಲೆಯ ಕಾರ್ಯದರ್ಶಿ  ಆಶಾ ವಿಜಯಕುಮಾರ್ ಕೆ.ಬಲರಾಂ, ಶಿವರಾಂ, ವರದರಾಜು ಉಪಸ್ಥಿತರಿದ್ದರು.

ಶ್ರವಣಬೆಳಗೊಳದ ಆದಿಕವಿ ಪಂಪ ಗ್ರಂಥಾಲಯದಲ್ಲಿ ಕುಮಾರಿ ಹಿತಾನ್ಯ ಬಿ.ವೈ ರ ಭರತ ನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ಕ್ಷೇತ್ರದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಗೌರವಿಸಿದ ಸಂದರ್ಭದಲ್ಲಿ ಸ್ವಾತಿ ಪಿ.ಭಾರದ್ವಾಜ್ ರವಿ ನಾಕಲಗೂಡು ಕಲಾವಿದೆ ಹಿತಾನ್ಯ ಪಾಲ್ಗೊಂಡಿದ್ದರು.

ಶ್ರವಣಬೆಳಗೊಳದ ಆದಿಕವಿ ಪಂಪ ಗ್ರಂಥಾಲಯದಲ್ಲಿ ಕುಮಾರಿ ಹಿತಾನ್ಯ ಬಿ.ವೈ ರ ಭರತ ನಾಟ್ಯ ರಂಗ ಪ್ರವೇಶ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಿದ ಕುಮಾರಿ ಹಿತಾನ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.