ADVERTISEMENT

ಚನ್ನರಾಯಪಟ್ಟಣ: ಕಾರಿನ ಡ್ಯಾಶ್‌ ಬೋರ್ಡ್‌ನಲ್ಲಿದ್ದ ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 5:59 IST
Last Updated 16 ಡಿಸೆಂಬರ್ 2025, 5:59 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಎಂ.ಕೆ. ಹೊಸೂರು ಗ್ರಾಮದಲ್ಲಿ ಕಾರಿನ ಡ್ಯಾಶ್‌ ಬೋರ್ಡ್‌ನಲ್ಲಿದ್ದ ₹4.70 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ.

ಗ್ರಾಮದ ಮೂರ್ತಿ ಅವರು ಬೆಂಗಳೂರಿನಲ್ಲಿ ವಕೀಲ ವೃತ್ತಿ ಮಾಡಿಕೊಂಡಿದ್ದು, ಡಿ.12ರಂದು ಸಂಬಂಧಿಕರ ಮದುವೆಗೆಂದು ಕುಟುಂಬ ಸಮೇತ ಎಂ.ಕೆ. ಹೊಸೂರು ಗ್ರಾಮಕ್ಕೆ ಬಂದಿದ್ದರು. ಡಿ.13ರಂದು ರಾತ್ರಿ 8 ಗಂಟೆಗೆ ಗ್ರಾಮದ ಬೋರೆಗೌಡರವರ ಮನೆಗೆ ಊಟಕ್ಕೆ ಹೋಗಿದ್ದರು.  ಒಂದು ಟೈಟನ್ ವಾಚ್‌ ಹಾಗೂ ಚಿನ್ನಾಭರಣಗಳನ್ನು ಬಾಕ್ಸ್‌ನಲ್ಲಿ ಹಾಕಿ, ಕಾರಿನ ಡ್ಯಾಶ್‌ಬೋರ್ಡನಲ್ಲಿ ಇಟ್ಟಿದ್ದರು. ಕಾರನ್ನು ಲಾಕ್ ಮಾಡದೇ ಊಟಕ್ಕೆ ಹೋಗಿದ್ದರು. ಊಟ ಮುಗಿಸಿಕೊಂಡು ವಾಪಸ್ ಬಂದು ಕಾರಿನಲ್ಲಿ ಹೋಗುವಾಗ ಡ್ಯಾಶ್‌ ಬೋರ್ಡ್‌ನಲ್ಲಿ ಒಟ್ಟು 78 ಗ್ರಾಂ ಚಿನ್ನಾಭರಣ ಇರಲಿಲ್ಲ. ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.