ADVERTISEMENT

ಹಿರೀಸಾವೆ: ಸಂತೆಯಲ್ಲಿ ಪೋಷಕರ ಬೆಳೆ, ಮಕ್ಕಳ ಬೆಲೆ; ವ್ಯಾಪಾರ ಜೋರು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 2:05 IST
Last Updated 22 ಡಿಸೆಂಬರ್ 2025, 2:05 IST
ಹಿರೀಸಾವೆ ಪಿಎಂಶ್ರೀ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್ ತರಕಾರಿ ಖರೀದಿಸಿ, ಮಕ್ಕಳ ಸಂತೆಯನ್ನು ಉದ್ಘಾಟಿಸಿದರು.
ಹಿರೀಸಾವೆ ಪಿಎಂಶ್ರೀ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್ ತರಕಾರಿ ಖರೀದಿಸಿ, ಮಕ್ಕಳ ಸಂತೆಯನ್ನು ಉದ್ಘಾಟಿಸಿದರು.   

ಹಿರೀಸಾವೆ: ಇಲ್ಲಿನ ಪಿಎಂಶ್ರೀ-ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಮಕ್ಕಳ ಸಂತೆಯಲ್ಲಿ ತೆಂಗಿನ ಕಾಯಿ, ಎಳನೀರಿನ ವ್ಯಾಪಾರ ಜೋರಾಗಿತ್ತು.

 ವಿದ್ಯಾರ್ಥಿಗಳು ತಮ್ಮ ಪೋಷಕರು ಬೆಳೆದ ತೆಂಗಿನ ಕಾಯಿ, ಎಳನೀರು, ತರಕಾರಿ, ಹಣ್ಣುಗಳು,   ಕೆಲವರು ಮನೆಯಲ್ಲಿ ತಯಾರಿಸಿದ ಕರಕುಶಲ ವಸ್ತುಗಳಾದ ಮಣ್ಣಿನ ಲೋಟ, ಮಡಿಕೆ, ದೀಪ, ಕುಡಿಕೆ, ಭತ್ತದ ತೆನೆಯ ಆಲಂಕಾರಿಕ ವಸ್ತು,  ಜೋಳ ಮತ್ತು ಅಕ್ಕಿ ರೊಟ್ಟಿ, ಇಡ್ಲಿ, ಚರುಮುರಿ ಮುಂತಾದ ತಿಂಡಿಗಳು, ಬಟ್ಟೆ, ಬಳೆಯ  ಅಂಗಡಿಗಳನ್ನು ಮಕ್ಕಳ‌ ಸಂತೆಯಲ್ಲಿ  ನಡೆಸಿ, ಉತ್ತಮ ವ್ಯಾಪಾರ ಮಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್ ಮಕ್ಕಳ ಸಂತೆಯನ್ನು ಉದ್ಘಾಟಿಸಿದರು. ಶಿಕ್ಷಣ ಸಂಯೋಜಕ ಶ್ರೀನಿವಾಸ್, ಗ್ರಾಮ ಪಂಚಾಯಿತಿ ಸದಸ್ಯ ಮಾರುತಿ ಮಂಜುನಾಥ್, ಶಾಲೆಯ ಮುಖ್ಯ ಶಿಕ್ಷಕಿ ಉಮಾ ದೇವರಾಜು, ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಮೌರ್ಯ ಮತ್ತು ಸದಸ್ಯರು,  ಮುಖಂಡರಾದ ಲೋಕೇಶ್, ಮನು, ಮಂಜುನಾಥ್, ಫಣೀಶ್  ಭಾಗವಹಿಸಿದ್ದರು.

ADVERTISEMENT

ಅಗ್ಗ ವರ್ತಕರೂ ಗ್ರಾಹಕರೇ!

‘ಮಕ್ಕಳ ಸಂತೆ’ಯಲ್ಲಿ ಮಾರುಕಟ್ಟೆಗಿಂತ ಕಡಿಮೆ ಇದ್ದ ತೆಂಗಿನಕಾಯಿ ಎಳನೀರು ತರಕಾರಿ ಇತರೆ ವಸ್ತುಗಳನ್ನು ವ್ಯಾಪಾರಸ್ಥರು ಸಾರ್ವಜನಿಕರು ಖರೀಸಿದರು.  ‘ಮಕ್ಕಳ ಸಂತೆಯಲ್ಲಿ ವ್ಯಾಪಾರ ಮಾಡುವುದರಿಂದ ವಸ್ತುಗಳು ಮತ್ತು ಹಣದ ಮೌಲ್ಯ ಹಾಗೂ ವ್ಯಾಪಾರದಲ್ಲಿ ಚೌಕಾಸಿ ಮಾಡುವು ಬಗ್ಗೆ ತಿಳಿಯಿತು’ ಎಂದು ಬಾಳೆಹಣ್ಣು ಮಾರುತ್ತಿದ್ದ 7ನೇ ತರಗತಿಯ ವಿದ್ಯಾರ್ಥಿನಿ ಮಾನ್ಯ  ಅನುಭವ ವಿವರಿಸಿದಳು. ಪೋಷಕರ ಸಹಕಾರದೊಂದಿಗೆ ವಿದ್ಯಾರ್ಥಿಗಳು ವ್ಯಾಪಾರ ಮಾಡಿದರು. ಲಕ್ಷ್ಮಣ ಫಲ ಸಂತೆಗೆ ಬಂದವರ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.