ಆಲೂರು: ‘ಡೆಂಗಿ ಕಾಯಿಲೆ ಉಲ್ಭಣವಾಗದಂತೆ ಪಟ್ಟಣ ಪಂಚಾಯತಿ ವ್ಯಾಪ್ತಿಯ ಎಲ್ಲಾ ವಾರ್ಡುಗಳ ರಸ್ತೆ, ಚರಂಡಿ ಇನ್ನಿತರೆ ನೀರು ಸಂಗ್ರಹವಾಗುತ್ತಿರುವ ಸ್ಥಳಗಳಿಗೆ ಕ್ರಿಮಿನಾಶಕ ಸಿಂಪಡಿಸಲಾಗುತ್ತಿದೆ’ ಮುಖ್ಯಾಧಿಕಾರಿ ಸ್ಟೀಪನ್ ಪ್ರಕಾಶ್ ತಿಳಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಪ್ರತಿ ವಾರ್ಡುಗಳಲ್ಲಿ ಬೆಳಿಗ್ಗೆ ಕಸ ಸಂಗ್ರಹ ಮಾಡಲು ತೆರಳುವ ವಾಹನದ ಮೂಲಕ, ಮನೆ ಪರಿಸರದಲ್ಲಿ ನೀರು ಸಂಗ್ರಹವಾಗದಂತೆ ಪ್ರತಿಯೊಬ್ಬರೂ ಜಾಗ್ರತೆ ವಹಿಸಬೇಕು. ಪ್ರತಿ ದಿನ ಬೆಳಿಗ್ಗೆ ಸಂಜೆ ಮನೆಗಳಲ್ಲಿ ಧೂಪದ ಹೊಗೆ ಹಾಕಿದರೆ ಸೊಳ್ಳೆಗಳು ಮನೆಯೊಳಗೆ ಬಾರದಂತೆ ರಕ್ಷಣೆ ಮಾಡಿಕೊಳ್ಳಬಹುದು. ನೀರು ಸಂಗ್ರಹ ಮಾಡುವ ಹಂಡೆಗಳನ್ನು ಪ್ರತಿದಿನ ಶುಚಿಗೊಳಿಸಿ ಹೊಸ ನೀರನ್ನು ತುಂಬಿಟ್ಟುಕೊಳ್ಳಬೇಕು. ಮನೆಯಲ್ಲಿ ಸಾಧ್ಯವಾದಷ್ಟು ಸೊಳ್ಳೆ ಪರದೆ ಉಪಯೋಗಿಸಬೇಕೆಂದು ಸೂಚನೆ ನೀಡಿದ್ದಾರೆ.
‘ಮೈ ಚಳಿಯಾಗುವ ಲಕ್ಷಣಗಳು ಕಂಡುಬಂದರೆ ಕೂಡಲೆ ಸಮೀಪದ ಆಶಾ ಕಾರ್ಯಕರ್ತೆಯರು ವೈದ್ಯರನ್ನು ಸಂಪರ್ಕಿಸುವಂತೆ ಧ್ವನಿವರ್ದಕ ಮೂಲಕ ಪ್ರಚಾರ ಮಾಡಲಾಗುತ್ತಿದೆ. ಸಾರ್ವಜನಿಕರು ಪಟ್ಟಣ ಪಂಚಾಯಿತಿಯೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಹಕರಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.