ADVERTISEMENT

ರಾಮಮಂದಿರ: ದೇಣಿಗೆ ಸಂಗ್ರಹಕ್ಕೆ ಕೊರೊನಾ ಅಡ್ಡಿ; ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 12:34 IST
Last Updated 26 ಸೆಪ್ಟೆಂಬರ್ 2020, 12:34 IST
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ   

ಹಾಸನ: ಕೊರೊನಾದಿಂದಾಗಿ ರಾಮ ಮಂದಿರ ನಿರ್ಮಾಣ ದೇಣಿಗೆ ಸಂಗ್ರಹ ಆಂದೋಲನಕ್ಕೆ ಹಿನ್ನಡೆಯಾಗಿದೆಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಎಂ.ಜಿ. ರಸ್ತೆಯಲ್ಲಿರುವ ರ್ರಾ‍ಘವೇಂದ್ರ ಮಠಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಸುದ್ದಿಗಾರರ ಜತೆ
ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಎಸ್‌ಬಿಐ
ಬ್ಯಾಂಕ್‌ನಲ್ಲಿ ಖಾತೆ ತೆರೆಯಲಾಗಿದ್ದು, ದಾನಿಗಳು ಹಣವನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಜಮಾ ಮಾಡಲು
ವ್ಯವಸ್ಥೆ ಮಾಡಲಾಗಿದೆ. ಕೋವಿಡ್‌ ಪ್ರಕರಣ ಹೆಚ್ಚುತ್ತಿರುವ ಕಾರಣ ಅಯೋಧ್ಯೆಗೆ ಹೋಗಲು ಆಗಿಲ್ಲ ಎಂದರು.

ಕೋವಿಡ್‌ನಿಂದಾಗಿ ಕೆಲಸ ವಿಳಂಬವಾಗಿದೆ. ದೇಣಿಗೆ ಸಂಗ್ರಹಕ್ಕಾಗಿ ಮುಂದಿನ ದಿನಗಳಲ್ಲಿ ತಿಂಗಳು ಕಾಲ
ವಿಶೇಷ ಆಂದೋಲನ ಮಾಡಲಾಗುವುದು. ನಕಲಿ ಚೆಕ್‌ಗಳನ್ನು ಬಳಸಿ ರಾಮಮಂದಿರ ಟ್ರಸ್ಟ್‌ ಬ್ಯಾಂಕ್‌ನಿಂದ
ಹಣ ವರ್ಗಾವಣೆ ಆಗಿರುವ ಬಗ್ಗೆ ಕೇಳಿದ್ದೇನೆ. ಇ-ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಈ ತರಹ ಆಗುವುದು ಉಂಟು.
ಮುಂದೆ ಆ ರೀತಿ ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಲಾಗಿದೆ. ಮಂದಿರ ನಿರ್ಮಾಣಕ್ಕಾಗಿಯೇ ಪ್ರತ್ಯೇಕ
ಸಮಿತಿ ರಚಿಸಿ, ಜವಾಬ್ದಾರಿ ನೀಡಲಾಗಿದೆ ಎಂದರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.