ADVERTISEMENT

ಹಾಸನ: ಮತ್ತೆ 6 ಸಾವು, 211 ಜನ ಕೊರೊನಾದಿಂದ ಗುಣಮುಖ

309 ಜನರಿಗೆ ಕೊರೊನಾ ಸೋಂಕು ದೃಢ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 15:03 IST
Last Updated 2 ಅಕ್ಟೋಬರ್ 2020, 15:03 IST

ಹಾಸನ: ಜಿಲ್ಲೆಯಲ್ಲಿ 309 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, ಈ ವರೆಗೆ ಸೋಂಕಿತರ
ಸಂಖ್ಯೆ 17,470ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಮತ್ತೆ 6 ಜನ ಮೃತಪಟ್ಟಿದ್ದು, ಇದರೊಂದಿಗೆ ಸಾವಿನ ಸಂಖ್ಯೆ 341 ತಲುಪಿದೆ.

ಶುಕ್ರವಾರ ಬಿಡುಗಡೆಯಾದ 211 ಜನ ಸೇರಿದಂತೆ ಈವರೆಗೆ 13,571 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಹಾಸನ ತಾಲ್ಲೂಕಿನ ಮೂವರು, ಅರಸೀಕೆರೆ, ಬೇಲೂರು ಹಾಗೂಚನ್ನರಾಯಪಟ್ಟಣ ತಾಲ್ಲೂಕಿನ ತಲಾ ಒಬ್ಬರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಸರ್ಕಾರ ನಿಯಮಾನುಸಾರ ಅಂತ್ಯ ಕ್ರಿಯೆ ನೆರವೇರಿಸಲಾಯಿತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್‌ ತಿಳಿಸಿದರು.

ಜಿಲ್ಲೆಯಲ್ಲಿ 3,558 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್‌ ಸೆಂಟರ್‌ ಹಾಗೂಹೋಂ ಐಸೋಲೇಷನ್‌ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 49 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ADVERTISEMENT

ಹೊಸದಾಗಿ ಅರಸೀಕೆರೆ 26, ಚನ್ನರಾಯಪಟ್ಟಣ 66, ಆಲೂರು 3, ಹಾಸನ 134, ಹೊಳೆನರಸೀಪುರ 30, ಅರಕಲಗೂಡು 26, ಬೇಲೂರು 19, ಸಕಲೇಶಪುರ 4 ಹಾಗೂ ಹೊರ ಜಿಲ್ಲೆಯ ಒಬ್ಬರಿಗೆ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.