
ಪ್ರಜಾವಾಣಿ ವಾರ್ತೆ
ಹಾಸನ: ಆಟೋರಿಕ್ಷಾ ಚಾಲಕರಿಬ್ಬರ ನಡುವೆ ಸೋಮವಾರ ರಾತ್ರಿ ನಡೆದ ಜಗಳ ಕೊಲೆಯಲ್ಲಿ ಕೊನೆಯಾಗಿ, ಕೊಲೆಯ ವಿಡಿಯೊವನ್ನು ಮೃತ ಚಾಲಕನ ಸಹೋದರನಿಗೆ ಕಳಿಸಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ನಗರದ ಚನ್ನಪಟ್ಟಣ–ಬಿಟ್ಟಗೌಡನಹಳ್ಳಿ ಜಂಕ್ಷನ್ ಸಮೀಪದ ಕೋಳಿಫಾರಂ ಹಿಂಭಾಗ ಕೃತ್ಯ ನಡೆದಿದೆ. ತಾಲ್ಲೂಕಿನ ಹೂವಿನಹಳ್ಳಿ ಕಾವಲಿನ ಕೀರ್ತಿ (24) ಕೊಲೆಯಾದ ಯುವಕ. ಆಲೂರು ತಾಲ್ಲೂಕು ದೊಡ್ಡ ಕಣಗಾಲ್ ಗ್ರಾಮದ ಉಲ್ಲಾಸ್ ಪ್ರಮುಖ ಆರೋಪಿ.
ಘಟನೆ ನಡೆದಾಗ ಚಾಲಕರು ಗಾಂಜಾ ಅಮಲಿನಲ್ಲಿದ್ದರು. ಆರೋಪಿಗಳು ಕೀರ್ತಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಬಳಿಕ, ವಿಡಿಯೊ ಮಾಡಲಾಗಿದೆ. ಪಿಎಸ್ಐ ಪ್ರಿಯಾಂಕ ಸ್ಥಳಕ್ಕೆ ಭೇಟಿ ನೀಡಿದ್ದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.