ADVERTISEMENT

ಆಲೂರು | ರಸ್ತೆಯಲ್ಲಿ ಗುಂಡಿ: ಸಂಚಾರ ಸಂಕಟ

ಎಂ.ಪಿ.ಹರೀಶ್
Published 25 ಜುಲೈ 2025, 2:31 IST
Last Updated 25 ಜುಲೈ 2025, 2:31 IST
<div class="paragraphs"><p>ಆಲೂರು ತಾಲ್ಲೂಕಿನ ಕಾಮತಿ ಕೂಡಿಗೆಯ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಮಳೆ ನೀರು ಸಂಗ್ರಹಗೊಂಡಿರುವುದು</p></div>

ಆಲೂರು ತಾಲ್ಲೂಕಿನ ಕಾಮತಿ ಕೂಡಿಗೆಯ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು, ಮಳೆ ನೀರು ಸಂಗ್ರಹಗೊಂಡಿರುವುದು

   

ಆಲೂರು: ಪಾಳ್ಯ ಹೋಬಳಿ ಕಾಮತಿ ಕೂಡಿಗೆಯಲ್ಲಿ, ಹುಣಸೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಆಳವಾದ ಗುಂಡಿ ಬಿದ್ದಿದ್ದು, ಸಂಚಾರಕ್ಕೆ ತೊಡಕುಂಟಾಗಿದೆ.

ಆಲೂರಿನಿಂದ ಕಣತೂರು, ಕಾಮತಿಕೂಡಿಗೆ ಮೂಲಕ ಬೇಲೂರು ತಾಲ್ಲೂಕು ಸಂಪರ್ಕ ಕಲ್ಪಸುವ ರಸ್ತೆ ಇದಾಗಿದೆ.

ADVERTISEMENT

ಹುಣಸೆ, ಹೊಳಲು, ಕೆಸಗೋಡು ಸೇರಿದಂತೆ ಹಲವು ಗ್ರಾಮಗಳಮೂಲಕ ಬಿಕ್ಕೋಡು ಗ್ರಾಮಕ್ಕೆ ತಲುಪುತ್ತದೆ. ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು, ಜನಸಾಮಾನ್ಯರು ಓಡಾಡುತ್ತಾರೆ.

ಅತಿ ಹೆಚ್ಚು ಕಾಫಿ ತೋಟ, ಕೃಷಿ ಹೊಂದಿರುವ ಈ ವ್ಯಾಪ್ತಿಯಲ್ಲಿಪ್ರತಿದಿನ ನೂರಾರು ಟ್ರ್ಯಾಕ್ಟರ್‌ಗಳು,ಕಾರ್ಮಿಕರು ಮತ್ತುವಿದ್ಯಾರ್ಥಿಗಳು ಇದೆ ರಸ್ತೆಯಲ್ಲಿ ಓಡಾಡುತ್ತಾರೆ.ರಸ್ತೆ ಹದಗೆಟ್ಟ ಕಾರಣ ಸಂಚರಿಸುವುದು →ದುಸ್ತರವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ರಸ್ತೆಯಲ್ಲಿ ಆಳವಾದ ಗುಂಡಿ ಬಿದ್ದಿರುವುದರಿಂದ ಮಳೆಗಾಲದಲ್ಲಿ ಸಣ್ಣ ಕೆರೆಯಂತಾಗುತ್ತದೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕು. ಪ್ರತಿದಿನ ವಾಹನಗಳು ಓಡಾಡುವುದರಿಂದ ದಿನದಿಂದ ದಿನಕ್ಕೆ ಗುಂಡಿಗಳ ಆಳಹೆಚ್ಚಾಗುತ್ತಿದೆ.ರಸ್ತೆ ಅಕ್ಕಪಕ್ಕ ಅಂಗಡಿಗಳಿದ್ದು, ವಾಹನಗಳು ಓಡಾಡುವಸಂದರ್ಭದಲ್ಲಿ ನೀರು ಅಂಗಡಿಯ ವ್ಯಾಪಾರಿಗಳು ಹಾಗೂ ಗ್ರಾಹಕರ ಮೈಗೆ ಚಿಮ್ಮುತ್ತದೆ.

ಕೂಡಲೇ ರಸ್ತೆ ಗುಂಡಿ ಮುಚ್ಚಿ ಸಾರ್ವಜನಿಕರು ಮತ್ತು ವಾಹನಗಳ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಕಾಮತಿಕೂಡಿಗೆಯ ಚಂದ್ರಶೇಖರ್‌ ಒತ್ತಾಯಿಸಿದ್ದಾರೆ.

ಸಾವಿರಾರು ವಾಹನಗಳು, ಕೃಷಿ ಕಾರ್ಮಿಕರು ಓಡಾಡುವ ಈ ರಸ್ತೆಯಲ್ಲಿ ಆಳವಾದ ಗುಂಡಿ ಬಿದ್ದು, ತಿರುಗಾಡಲು ಸಾಧ್ಯವಾಗುತ್ತಿಲ್ಲ. ಕೂಡಲೇ ದುರಸ್ತಿ ಕೈಗೊಳ್ಳಬೇಕು
ಚಂದ್ರಶೇಖರ್ ಕಾಮತಿಕೂಡಿಗೆ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.