ADVERTISEMENT

ಹಾಸನ ನಗರಸಭೆ ಆಯುಕ್ತರ ಅಮಾನತಿಗೆ ರೇವಣ್ಣ ಆಗ್ರಹ

ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ: ಶಾಸಕ ಎಚ್.ಡಿ.ರೇವಣ್ಣ ಆರೋಪ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2022, 15:44 IST
Last Updated 11 ಏಪ್ರಿಲ್ 2022, 15:44 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ಜಿಲ್ಲಾಧಿಕಾರಿ ಆರ್.ಗಿರೀಶ್‌ ಆದೇಶ ಹೊರಡಿಸಿ ತಿಂಗಳು ಕಳೆದರೂಸಾಮಾನ್ಯಸಭೆ ನಡೆಸದ ನಗರಸಭೆ ಆಯುಕ್ತ ಪರಮೇಶ್ವರಪ್ಪ ಅವರನ್ನು ಕೂಡಲೇ ಅಮಾನತ್ತುಮಾಡಬೇಕು ಎಂದು ಶಾಸಕ ಎಚ್.ಡಿ. ರೇವಣ್ಣ ಒತ್ತಾಯಿಸಿದರು.

‘ಕಾನೂನು ಬಾಹಿರವಾಗಿ ನಗರಸಭೆ ಅಧಿಕಾರ ಹಿಡಿದಿರುವ ಬಿಜೆಪಿ, ಒಂಬತ್ತು ತಿಂಗಳಿನಿಂದ ಸಾಮಾನ್ಯ ಸಭೆ ನಡೆಸಿರಲಿಲ್ಲ. ಕಳೆದ ತಿಂಗಳು ನಡೆದಸಾಮಾನ್ಯ ಸಭೆಯಲ್ಲಿ ಕೇವಲ 12 ಮಂದಿ ಸದಸ್ಯರ ಸಹಿ ಪಡೆದುವಿಷಯಗಳನ್ನು ಅಂಗೀಕರಿಸಲಾಗಿದೆ ಎಂದು ಷರಾ ಬರೆದಿದ್ದರು. ಈ ಬಗ್ಗೆ ಜೆಡಿಎಸ್‍ನ 21 ಮಂದಿ ಜಿಲ್ಲಾಧಿಕಾರಿಗೆ ದೂರು ನೀಡಿದಾಗ ಹಿಂದಿನಸಾಮಾನ್ಯ ಸಭೆಯನ್ನು ರದ್ದುಪಡಿಸಿ ಹೊಸದಾಗಿ ಸಭೆ ಕರೆಯುವಂತೆ ಡಿ.ಸಿಆದೇಶ ಹೊರಡಿಸಿದ್ದರು. ಈವರೆಗೂ ಆದೇಶ ಪಾಲನೆ ಮಾಡದ ಆಯುಕ್ತರನ್ನುಅಮಾನತು ಮಾಡಬೇಕು. ಇಲ್ಲವಾದರೆ ಪ್ರಾಧಿಕಾರದ ಮೊರೆಹೋಗಲಾಗುವುದು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

‘ಪರಮೇಶ್ವರಪ್ಪ ಅವರು ₹ 50 ಲಕ್ಷ ಕೊಟ್ಟು ಹಾಸನಕ್ಕೆಬಂದಿರುವುದಾಗಿ ಹೇಳುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಸಚಿವರಿಗೆ ಮಾಹಿತಿನೀಡಿದ್ದೇನೆ. ಆಯುಕ್ತರು ರಾಜಕೀಯ ಮಾಡುವುದಾದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜಕೀಯಕ್ಕೆ ಬರಲಿ. ನಗರಸಭೆಯಲ್ಲಿ ಹೇಳುವರು ಕೇಳುವರು ಯಾರೂ ಇಲ್ಲದಂತಾಗಿದೆ. ಇದೇ ರೀತಿ ಮುಂದುವರಿದರೆ ಅಧಿಕಾರಿಗಳು ಯಾವತ್ತಾದರು ಶಿಕ್ಷೆ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

‘ನಗರದ ಮಹಾರಾಜ ಪಾರ್ಕ್‍ನ ಅಭಿವೃದ್ಧಿಗೆ ಯಾವುದೇ ಯೋಜನೆರೂಪಿಸದೆ ₹14 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ರಾಜ್ಯಸಭಾಸದಸ್ಯ ಎಚ್.ಡಿ. ದೇವೇಗೌಡರು ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ತಂದಿದ್ದ ₹ 10 ಕೋಟಿ ಅನುದಾನದಲ್ಲೂ ಲೂಟಿ ಮಾಡಿದ್ದಾರೆ. ತಹಶೀಲ್ದಾರ್,ಉಪವಿಭಾಗಾಧಿಕಾರಿ ಕಚೇರಿ ಬಿಜೆಪಿ ಕಚೇರಿಗಳಾಗಿವೆ’ ಎಂದು ಆಕ್ರೋಶವ್ಯಕ್ತಪಡಿಸಿದರು.

‘ಮನಬಂದಂತೆ ಕಾಮಗಾರಿ ನಡೆಸಲು ಜಿಲ್ಲಾ ಕೇಂದ್ರವನ್ನು ಯಾವ ಪಕ್ಷಕ್ಕೂಗುತ್ತಿಗೆ ನೀಡಿಲ್ಲ. ಜಿಲ್ಲೆಯ ಎಲ್ಲಾ 7 ಶಾಸಕರಿಗೂ ಜಿಲ್ಲಾ ಕೇಂದ್ರದ ಸಂಬಂಧವಿದೆ. ಹಾಸನ ಶಾಸಕರು ಈಗ ಮುಸ್ಲಿಮರ ಮನೆ ಬಳಿ ತೆರಳಿ ಹಕ್ಕುಪತ್ರ ವಿತರಣೆ ನಾಟಕ ಮಾಡುತ್ತಿದ್ದಾರೆ’ ಎಂದುಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.