ADVERTISEMENT

ಮುದ್ದಹನುಮೇಗೌಡರದ ಬಗ್ಗೆ ‘ನೋ ಕಾಮೆಂಟ್’ ಅಂದ್ರು ದೇವೇಗೌಡ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 8:35 IST
Last Updated 25 ಮಾರ್ಚ್ 2019, 8:35 IST
   

ಹಾಸನ: ‘ನಾನು ತುಮಕೂರಿನಿಂದ ಸ್ಪರ್ಧೆ ಮಾಡಲು ನಿರ್ಧರಿಸಿರಲಿಲ್ಲ. ಸಿಎಂ ಕುಮಾರಸ್ವಾಮಿ ಹಾಗೂ ಕಾರ್ಯಕರ್ತರು, ಮುಖಂಡರ ಒತ್ತಾಯಕ್ಕೆ ಕಟ್ಟುಬಿದ್ದು ನಿಲ್ಲಬೇಕಾಯಿತು’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದರು.

ಹೊಳೆನರಸೀಪುರದ ಮಾವಿನಕೆರೆ ಬೆಟ್ಟದಲ್ಲಿ ದೇವರಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಪರಮೇಶ್ವರ್ ಸಹ ಮನೆಗೆ ಬಂದು ನೀವೇ ನಿಲ್ಲಬೇಕು ಎಂದು ಮನವಿ ಮಾಡಿದರು. ಎಲ್ಲರ ಒತ್ತಡದಿಂದ ಅಲ್ಲಿಂದಲೇ ಕಣಕ್ಕಿಳಿಯೋ ನಿರ್ಧಾರ ಮಾಡಿದೆ ಎಂದರು.

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ನಾನು ಸ್ಪರ್ಧಿಸುವುದಿಲ್ಲ. ಆ ಕ್ಷೇತ್ರವನ್ನುಕಾಂಗ್ರೆಸ್‌ಗೆಬಿಟ್ಟುಕೊಟ್ಟಿದ್ದೇವೆ.ಇಂದು ಮಧ್ಯಾಹ್ನ ತುಮಕೂರಿನಲ್ಲಿ ನಾಮಪತ್ರ ಸಲ್ಲಿಸುವೆ.ರಂಗನಾಥ ಸ್ವಾಮಿಯ ನಂಬಿಕೆಯಿಂದ ಕಣಕ್ಕಿಳಿಯುತ್ತಿದ್ದೇನೆ ಎಂದರು.

ADVERTISEMENT

ಮುದ್ದಹನುಮೇಗೌಡರ ಬಂಡಾಯ ಸ್ಪರ್ಧೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ನೋ ಕಾಮೆಂಟ್’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.