ADVERTISEMENT

ಬಡವರು, ನಿರಾಶ್ರಿತರ ಕೇಂದ್ರಕ್ಕೆ ತರಕಾರಿ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 16:24 IST
Last Updated 17 ಏಪ್ರಿಲ್ 2020, 16:24 IST
ಅರಸೀಕೆರೆ ನಗರದಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ತರಕಾರಿ ವಿತರಿಸಿದ ಮೆಹಬೂಬ್ ಪಾಷಾ ಮತ್ತು ತಂಡದವರು
ಅರಸೀಕೆರೆ ನಗರದಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ತರಕಾರಿ ವಿತರಿಸಿದ ಮೆಹಬೂಬ್ ಪಾಷಾ ಮತ್ತು ತಂಡದವರು   

ಅರಸೀಕೆರೆ: ನಗರದ ಎಪಿಎಂಸಿ ಅಧ್ಯಕ್ಷ ಮೆಹಬೂಬ್ ಪಾಷಾ ಅವರು ರೈತರಿಂದ ನೇರವಾಗಿ ತರಕಾರಿ, ಹಣ್ಣುಗಳನ್ನು ಖರೀದಿಸಿ ಬಡವರಿಗೆ ಉಚಿತವಾಗಿ ವಿತರಿಸುತ್ತಿದ್ದಾರೆ.

ಟಿಪ್ಪು ನಗರದ ನಿವಾಸಿಯಾದ ಮೆಹಬೂಬ್‌ ಷಾಷಾ ಅವರು ಲಾಕ್‌ ಡೌನ್‌ ಘೋಷಣೆಯಾದ ದಿನದಿಂದಲೂ ತರಕಾರಿಯನ್ನು ವಿತರಣೆ ಟೊಮೆಟೊ, ಬೀನ್ಸ್‌, ಕ್ಯಾಪ್ಶಿಕಂ ಸೇರಿದಂತೆ ವಿವಿಧ ತರಕಾರಿ, ಸೊಪ್ಪು, ಬಾಳೆಹಣ್ಣು ಖರೀದಿಸಿ, ಬಡವರು ಹೆಚ್ಚಾಗಿ ವಾಸಿಸುವ ಬಡಾವಣೆಗಳಲ್ಲಿ ವಿತರಿಸುತ್ತಿದ್ದಾರೆ. ತಾಲ್ಲೂಕು ಆಡಳಿತ ಕೇಂದ್ರವು ತೆರೆದಿರುವ ನಿರಾಶ್ರಿತರ ಕೇಂದ್ರಕ್ಕೂ ತರಕಾರಿಯನ್ನು ಪೂರೈಸುತ್ತಿದ್ದಾರೆ.

‘ಎರಡು ದಿನಗಳಿಗೊಮ್ಮೆ 100ರಿಂದ 150 ಕೆ.ಜಿ ತರಕಾರಿ ಖರೀದಿಸಿ ವಿತರಿಸುತ್ತೇನೆ. ಇದಕ್ಕೆ ನಗರದ ಎಸ್‌.ಎಲ್‌.ಎನ್‌.ಯೋಗೇಶ್‌ ಅವರೂ ಸಹ ಹಣಕಾಸಿನ ಸಹಕಾರ ನೀಡುತ್ತಿದ್ದಾರೆ’ ಎಂದು ಮೆಹಬೂಬ್‌ ಷಾಷಾ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.