ADVERTISEMENT

ದೊಡ್ಡಮ್ಮ, ಚಿಕ್ಕಮ್ಮ ದೇವತೆ ದೇವಾಲಯ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 4:36 IST
Last Updated 25 ಅಕ್ಟೋಬರ್ 2025, 4:36 IST
ಕೊಣನೂರು ಸಮೀಪದ ಕೆ.ಬಸವನಹಳ್ಳಿ ಗ್ರಾಮದಲ್ಲಿ ಜರುಗಿದ ದೊಡ್ಡಮ್ಮ ಮತ್ತು ಚಿಕ್ಕಮ್ಮ ದೇವತೆಗಳ ದೇವಾಲಯ ಲೋಕಾರ್ಪಣೆ ಮತ್ತು ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಮಹಿಳೆಯರು ಮತ್ತು ಮಕ್ಕಳು ಕಾವೇರಿ ನದಿಯಿಂದ ಕಲಶ ಹೊತ್ತು ತಂದರು 
ಕೊಣನೂರು ಸಮೀಪದ ಕೆ.ಬಸವನಹಳ್ಳಿ ಗ್ರಾಮದಲ್ಲಿ ಜರುಗಿದ ದೊಡ್ಡಮ್ಮ ಮತ್ತು ಚಿಕ್ಕಮ್ಮ ದೇವತೆಗಳ ದೇವಾಲಯ ಲೋಕಾರ್ಪಣೆ ಮತ್ತು ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಮಹಿಳೆಯರು ಮತ್ತು ಮಕ್ಕಳು ಕಾವೇರಿ ನದಿಯಿಂದ ಕಲಶ ಹೊತ್ತು ತಂದರು    

ಕೊಣನೂರು: ದೊಡ್ಡಮ್ಮ ಮತ್ತು ಚಿಕ್ಕಮ್ಮ ದೇವತೆಗಳ ದೇವಾಲಯ ಲೋಕಾರ್ಪಣೆ ಮತ್ತು ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.

ಸಮೀಪದ ಕೆ.ಬಸವನಹಳ್ಳಿಯಲ್ಲಿ ಗುರುವಾರ ಮತ್ತು ಶುಕ್ರವಾರ ಜರುಗಿದ ಗ್ರಾಮದೇವತೆ ದೊಡ್ಡಮ್ಮ ಮತ್ತು ಚಿಕ್ಕಮ್ಮರ ನೂತನ ದೇವಾಲಯದಲ್ಲಿ ವಿಶೇಷ ಧಾರ್ಮಿಕ ವಿಧಿ–ವಿಧಾನಗಳು ಜರುಗಿದವು. ಗುರುವಾರ ಬೆಳಿಗ್ಗೆ ಗಣಪತಿ ಪೂಜೆಯಿಂದ ಪ್ರಾರಂಭವಾದ ವಿಶೇಷ ಪೂಜಾ ಕಾರ್ಯಕ್ರಮಗಳು ವಿವಿಧ ಹೋಮ–ಹವನ, ಬಲಿಪೂಜೆ, ಬಿಂಬಶುದ್ಧಿ ಅಷ್ಟಬಂಧ ಪ್ರತಿಜ್ಞೆಯಿಂದ ಮುಕ್ತಾಯವಾದವು.

ಶುಕ್ರವಾರ ಬೆಳಿಗ್ಗೆ ಗಂಗಾಪೂಜೆಯ ಮೂಲಕ ಮಹಿಳೆಯರು ಹಸುಕರು ಮತ್ತು ದೊಡ್ಡಮ್ಮ ದೇವಿಯ ಉತ್ಸವ ಮೂರ್ತಿಯ ಮೆರವಣಿಗೆಯೊಂದಿಗೆ ಕಲಶ ಹೊತ್ತು ತಂದ ನಂತರ ಎರಡೂ ದೇವಾಲಯಗಳಿಗೂ ಶಿಖರ ಕಲಶ ಪ್ರತಿಷ್ಠಾಪನೆ ನೆರವೇರಿಸಲಾಯಿತು. ವಿವಿಧ ಹೋಮ ಮತ್ತು ಪೂರ್ಣಾಹುತಿ ನೀಡಿ ಮಹಾಮಂಗಳಾರತಿ ಮಾಡಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. 2 ದಿನಗಳು ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು.

ADVERTISEMENT
ಕೊಣನೂರು ಸಮೀಪದ ಕೆ.ಬಸವನಹಳ್ಳಿ ಗ್ರಾಮದಲ್ಲಿ ಜರುಗಿದ ದೊಡ್ಡಮ್ಮ ಮತ್ತು ಚಿಕ್ಕಮ್ಮ ದೇವತೆಗಳ ದೇವಾಲಯ ಲೋಕಾರ್ಪಣೆ ಮತ್ತು ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದ ನಿಮಿತ್ತ ಮಹಿಳೆಯರು ಮತ್ತು ಮಕ್ಕಳು ಕಾವೇರಿ ನದಿಯಿಂದ ಕಲಶ ಹೊತ್ತು ತಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.