ADVERTISEMENT

ಹಾಸನ: ಜಾತಿವಾರು ಗಣತಿ ವೇಳೆ ಶಿಕ್ಷಕಿ ಸೇರಿ 8 ಮಂದಿ ಮೇಲೆ ಬೀದಿ ನಾಯಿಗಳ ದಾಳಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 19:49 IST
Last Updated 5 ಅಕ್ಟೋಬರ್ 2025, 19:49 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಹಾಸನ: ಜಿಲ್ಲೆಯ ಬೇಲೂರಿನಲ್ಲಿ ಭಾನುವಾರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ತೆರಳಿದ್ದ ಶಿಕ್ಷಕಿ, ಅವರ ರಕ್ಷಣೆಗೆ ಬಂದ ಎಂಟು ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ.

ಬಿಎಚ್‌ಪಿಎಸ್ ಶಾಲೆಯ ಶಿಕ್ಷಕಿ ಚಿಕ್ಕಮ್ಮ, ಅವರ ಪತಿ ಶಿವಕುಮಾರ್ ಅವರು ಬೇಲೂರಿನ ಹೊಯ್ಸಳ ನಗರದ ನವೀನ್ ಅವರ ಮನೆಗೆ ತೆರಳಿದ್ದಾಗ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ಮಾಡಿವೆ. 

ADVERTISEMENT

ಶಿಕ್ಷಕಿ ಚಿಕ್ಕಮ್ಮ ಅವರ ಮುಖ, ಕೈ, ಕಾಲು, ದೇಹದ ಹಲವು ಭಾಗಗಳಿಗೆ ಗಾಯಗಳಾಗಿವೆ. ಅವರ ಪತಿಗೂ ನಾಯಿಗಳು ಕಚ್ಚಿವೆ. ದಂಪತಿ ರಕ್ಷಿಸಲು ಬಂದ ಧರ್ಮ, ಪೃಥ್ವಿ, ಸಚಿನ್ ಸೇರಿದಂತೆ ಏಳು ಮಂದಿಗೂ ಕಚ್ಚಿವೆ. ಸಮೀಪದಲ್ಲಿ ಆಡುತ್ತಿದ್ದ ಐದು ವರ್ಷದ ಬಾಲಕ ಕಿಶನ್ ಮೇಲೂ ದಾಳಿ ಮಾಡಿವೆ. ಗಾಯಗೊಂಡ ಎಲ್ಲರಿಗೂ  ಬೇಲೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.