ಬೇಲೂರು: ಇಲ್ಲಿನ ರಾಘವೇಂದ್ರ ಮಠದ ಮುಂಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಕೆಳಹಂತದಲ್ಲಿ ಜೋತು ಬಿದ್ದಿದ್ದು, ಸ್ಥಳೀಯರು ಜೀವಭಯದಲ್ಲೇ ಸಂಚರಿಸಬೇಕಿದೆ.
11ನೇ ವಾರ್ಡ್‌ನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು, ಬೀದಿ ದೀಪ ಅಳವಡಿಸಲು ಕಂಬಗಳ ಮೂಲಕ ಹಾದು ಹೋಗಿರುವ ವಿದ್ಯುತ್ ತಂತಿಗಳು ನೆಲಮಟ್ಟದಿಂದ ಕೇವಲ 8 ಅಡಿ ಎತ್ತರವಿದ್ದು, 100 ಅಡಿಗಳಷ್ಟು ದೂರ ಈ ಸಮಸ್ಯೆ ಎದುರಾಗಿದೆ. ವಸ್ತುಗಳನ್ನು ಮೇಲೆತ್ತಿ ಹೋಗುವಾಗ ವಿದ್ಯುತ್ ಶಾಕ್ ಆಗುವ ಸಾಧ್ಯತೆಗಳಿವೆ. ಸ್ಥಳೀಯರಿಗೆ ಸಮಸ್ಯೆ ಎದುರಾಗಿದೆ.
ಮಠದ ಎದುರು ಇರುವ ಅರಳಿ ಮರದ ಕೊಂಬೆಗಳು ತಂತಿಯ ಮೇಲೆ ಬೀಳುತ್ತಿರುವುದರಿಂದ ವಿದ್ಯುತ್ ತಂತಿಗಳು ಕೆಳಕ್ಕೆ ಬಾಗುತ್ತಿವೆ. ಗಾಳಿಗೆ ತಂತಿಗಳು ಪರಸ್ಪರ ಸ್ಪರ್ಶಿಸಿ ಬೆಂಕಿ ಬರುತ್ತಿದೆ. ಸೆಸ್ಕ್ ಸಿಬ್ಬಂದಿಗೆ ಈ ಬಗ್ಗೆ ಸಾಕಷ್ಟು ಭಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ .ಅಧಿಕಾರಿಗಳು ಗಮನಹರಿಸಿ ಅರಳಿ ಮರದ ಕೊಂಬೆಗಳನ್ನು ಕತ್ತರಿಸಿ, ಬಾಗಿರುವ ತಂತಿಗಳನ್ನು ಎತ್ತರಿಸಬೇಕು ಎಂದು ಮಠದ ಆರ್ಚಕ ಸುಧೀಂದ್ರ, ಸ್ಥಳೀಯರಾದ ಲಕ್ಷ್ಮಿಕಾಂತ್, ವಸಂತ, ತೇಜು, ಶಿವು ಆಗ್ರಹಿಸಿದ್ದಾರೆ.
ಸ್ಥಳ ಸ್ವತಃ ಭೇಟಿ ನೀಡಿ ಪರಿಶೀಲನೆ ಮಾಡಿ ಸಮಸ್ಯೆಯನ್ನು ಶೀಘ್ರವಾಗಿ ಸರಿಪಡಿಸಲಾಗುವುದು.ಬಸವರಾಜು ಸೆಸ್ಕ್ ಎಇಇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.