ಕೊಣನೂರು: ಸಮೀಪದ ಮತ್ತಿಗೋಡು ಬಳಿ ಭತ್ತದ ಹುಲ್ಲು ಹೊತ್ತು ಸಾಗಿಸುತ್ತಿದ್ದ ಟ್ರಾಕ್ಟರ್‌ಗೆ ವಿದ್ಯುತ್ ತಂತಿ ಸ್ಪರ್ಶವಾಗಿ ಹೊತ್ತಿ ಉರಿದ ಘಟನೆ ಬುಧವಾರ ರಾತ್ರಿ ನಡೆದಿದೆ.
ರಾಮನಾಥಪುರ ಹೋಬಳಿಯ ಮತ್ತಿಗೋಡಿನಿಂದ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರಕ್ಕೆ ಭತ್ತದ ಹುಲ್ಲು ತುಂಬಿಕೊಂಡು ಟ್ರಾಕ್ಟರ್‌ಗೆ ಹೊರಟಿತ್ತು.
ಬೆಂಕಿಯು ತೀವ್ರತೆ ನೋಡಿ ಚಾಲಕ ಹುಲ್ಲನ್ನು ಅಲ್ಲಿಯೇ ಸುರಿದು ವಾಹನದೊಂದಿಗೆ ಪರಾರಿಯಾಗಿದ್ದಾರೆ. ಹುಲ್ಲು ಸಂಪೂರ್ಣ ಭಸ್ಮವಾಗಿದೆ.
ಸುದೈವವಶಾತ್ ಯಾವುದೇ ಪ್ರಾಣಾಪಾಯಸಂಭವಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.