ADVERTISEMENT

ಹಾಸನ | ಕಾಡಾನೆಗಳ ದಾಳಿ: ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 27 ಮೇ 2020, 17:27 IST
Last Updated 27 ಮೇ 2020, 17:27 IST
ಹೆತ್ತೂರು ಹೋಬಳಿಯ ಅತ್ತಿಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಹಾನಿಯಾದ ಬೆಳೆ
ಹೆತ್ತೂರು ಹೋಬಳಿಯ ಅತ್ತಿಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಹಾನಿಯಾದ ಬೆಳೆ   

ಹೆತ್ತೂರು: ಹೋಬಳಿಯ ಅತ್ತಿಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಗ್ರಾಮದ ಎ.ಬಿ.ನಂದನ್ ಅವರ ಜಮೀನಿಗೆ ನುಗ್ಗಿದ ಕಾಡಾನೆಗಳು ಬಾಳೆ, ಅಡಿಕೆ, ಕಾಫಿ ಗಿಡ, ಕಾಳುಮೆಣಸು ಗಿಡಗಳನ್ನು ತಿಂದು, ತುಳಿದು ಹಾಳು ಮಾಡಿದೆ.

ನಂದನ್ ಅವರ ತೋಟದಲ್ಲಿದ್ದ ಕೃಷಿಹೊಂಡದಲ್ಲಿ ಬುಧವಾರ ಮುಂಜಾನೆಯಿಂದ ಮಧ್ಯಾಹ್ನದವರೆಗೂ ನೀರಿನಲ್ಲಿ ಈಜಾಡಿ ನೀರಾವರಿಗಾಗಿ ಇಟ್ಟಿದ ಪಂಪ್‌ಸೆಟ್ ಮೋಟಾರ್ ಅನ್ನು ಜಖಂಗೊಳಿಸಿದೆ. ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದೆ.

ADVERTISEMENT

ನಂದನ್ ಮಾತನಾಡಿ, ‘ಪ್ರತಿವರ್ಷ ಈ ಸಮಯದಲ್ಲಿ ಕಾಡಾನೆ ಹಾವಳಿ ಸಾಮಾನ್ಯವಾಗಿದ್ದು, ಬೆಳೆ ನಾಶ ಮಾಡಲಾಗುತ್ತಿದೆ. ಈಚೆಗೆ ಪಕ್ಕದ ಪಟ್ಲ ಹೆತ್ತೂರು ಗ್ರಾಮದ ಎಚ್.ಎನ್. ರವೀಶ್ ಅವರ ಕಾಫಿ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡಿದೆ’ ಎಂದರು.

ಕಾಡಾನೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿಗೆ ಓಡಿಸಿದರೆ ಸಾಲದು ಅವುಗಳನ್ನು ಸ್ಥಳಾಂತರ ಮಾಡಿದರೆ ಮಾತ್ರ ಬೆಳೆ ಹಾನಿ, ಪ್ರಾಣ ಹಾನಿ ತಪ್ಪಿಸಲು ಸಾಧ್ಯ, ಅರಣ್ಯ ಇಲಾಖೆ ಕಾಡಾನೆಯ ದಾಳಿ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.