ADVERTISEMENT

ವಿದ್ಯುತ್‌ ಪರಿವರ್ತಕ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 3:30 IST
Last Updated 30 ಮಾರ್ಚ್ 2021, 3:30 IST
ರಾಮನಾಥಪುರ ಸೆಸ್ಕ್ ಕಚೇರಿ ಮುಂದೆ ರೈತ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು
ರಾಮನಾಥಪುರ ಸೆಸ್ಕ್ ಕಚೇರಿ ಮುಂದೆ ರೈತ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು   

ಕೊಣನೂರು: ಹಲವು ಹಳ್ಳಿಗಳಲ್ಲಿ ಕೆಟ್ಟಿರುವ ವಿದ್ಯುತ್ ಪರಿವರ್ತಕಗಳನ್ನು ದುರಸ್ತಿಪಡಿಸಬೇಕು’ ಎಂದು ಆಗ್ರಹಿಸಿ ರೈತ ಸಂಘದ ಸದಸ್ಯರು ರಾಮನಾಥಪುರದ ಸೆಸ್ಕ್ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಬಸವಾಪಟ್ಟಣ ವ್ಯಾಪ್ತಿಯ ಹಲವು ಹಳ್ಳಿಗಳಲ್ಲಿ ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋಗಿ ತಿಂಗಳುಗಳೇ ಕಳೆದಿವೆ. ಈ ಕುರಿತು ಸೆಸ್ಕ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ನೀರಿಲ್ಲದೆ ಸಾವಿರಾರು ರೂಪಾಯಿ ವ್ಯಯಿಸಿ ಬೆಳೆದ ಬೆಳೆಗಳು ಬಿಸಿಲಿಗೆ ಒಣಗಿ ಹಾಳಾಗುತ್ತಿವೆ’ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

‘ಕೂಡಲೇ ಕೆಟ್ಟಿರುವ ವಿದ್ಯುತ್ ಪರಿವರ್ತಕಗಳನ್ನು ಬದಲಿಸಬೇಕು ಹಾಗೂ ನೀರಿಲ್ಲದೆ ಒಣಗಿ ನಾಶವಾದ ಬೆಳೆಗೆ ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಹಾನಗಲ್, ಬೆಳವಾಡಿ ಭಾಗದ ರೈತರು ಹಾಗೂ ರೈತ ಸಂಘದ ಸದಸ್ಯರು ಇಲ್ಲಿನ ಬಸವೇಶ್ವರ ಸರ್ಕಲ್‌ನಿಂದ ಪ್ರತಿಭಟನಾ ಮೆರವಣಿಗೆಯಲ್ಲಿ ಬಂದು ರಾಮನಾಥಪುರ ಸೆಸ್ಕ್ ಉಪವಿಭಾಗ ಕಚೇರಿಯ ಮುಂದೆ ಪ್ರತಿಭಟಿಸಿದರು.

ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಿನ್ನಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘದ ಜಗನ್ನಾಥ್, ಮಂಜೇಗೌಡ, ಚಂದ್ರು, ಶಿವಣ್ಣ, ಸತೀಶ್, ಬಂದಿಗನಹಳ್ಳಿ ರವಿ, ಮಂಜುನಾಥ್, ಕಿರಣ್, ಕೃಷ್ಣೇಗೌಡ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.