ಕೊಣನೂರು: ಮಳೆ ಬಿಡುವು ನೀಡಿದ ಹಿನ್ನೆಲೆಯಲ್ಲಿ ಹೊಗೆಸೊಪ್ಪು ಬೆಳೆಗಾರರು 15 ದಿನಗಳ ನಂತರ ಕೃಷಿ ಚಟುವಟಿಕೆ ಪ್ರಾರಂಭಿಸಿದ್ದಾರೆ.
ಕೊಣನೂರು ಮತ್ತು ರಾಮನಾಥಪುರ ಹೋಬಳಿಗಳ ವ್ಯಾಪ್ತಿಯಲ್ಲಿ ನಿತ್ಯವೂ ಸುರಿಯುತ್ತಿದ್ದ ಮಳೆಯ ಕಾಟದಿಂದಾಗಿ ಜಮೀನಿಗೆ ಹೊಗೆಸೊಪ್ಪಿನ ಸಸಿಗಳನ್ನು ನಾಟಿ ಮಾಡಿದ್ದು ಬಿಟ್ಟರೆ ನಂತರ ಸುಮ್ಮನಾಗಿದ್ದರು.
ಶನಿವಾರ ಮಳೆ ಬಿಡುವು ನೀಡಿದ್ದರಿಂದ ಸ್ವಲ್ಪ ಎತ್ತರದ ಮಳೆಯ ನೀರು ಬಸಿದುಹೋದ ಜಮೀನಿನಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಕೃಷಿ ಕಾರ್ಯದಲ್ಲಿ ಕಾರ್ಯೋನ್ಮುಖವಾಗಿದ್ದು, ಹೊಗೆಸೊಪ್ಪು ಬೆಳೆಯ ಜಮೀನಿನಲ್ಲಿ ಬೆಳೆದಿದ್ದ ಕಳೆಯನ್ನು ತೆಗೆಯುವ ಮತ್ತು ಗಿಡಗಳ ಬುಡಕ್ಕೆ ಮಣ್ಣು ಒದಗಿಸುವ ಮತ್ತು ಗೊಬ್ಬರ ಹಾಕುವ ಕೆಲಸವನ್ನು ತರಾತುರಿಯಿಂದ ಕೈಗೊಂಡಿದ್ದಾರೆ.
ಮುಂದಿನ ಒಂದು ವಾರ ಮಳೆಯಾಗದಿದ್ದರೆ, ಎಲ್ಲಾ ಬೆಳೆಗಳ ಜಮಿನು ಹಸನು ಮಾಡಿಕೊಳ್ಳಲು ಅವಕಾಶವಿದೆ. ತಗ್ಗು ಪ್ರದೇಶದ ಹೊಗೆಸೊಪ್ಪಿನ ಜಮೀನಿನಲ್ಲಿ ಶೀತಾಂಶವು ಕಡಿಮೆಯಾಗಲು ಇನ್ನೂ 2 ಅಥವ 3 ದಿನ ಮಳೆ ಬಾರದಿದ್ದರೆ ಮಾತ್ರ ಸಾಧ್ಯವಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.