ಸಕಲೇಶಪುರ: ತಾಲ್ಲೂಕಿನ ಕುಂಬರಡಿ ಗ್ರಾಮದ ಸ.ನಂ. 116ರಲ್ಲಿ ಗುರುವಾರ ವಲಯ ಅರಣ್ಯ ಇಲಾಖೆ ಅಧಿಕಾರಿಗಳು 15 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಿದ್ದಾರೆ.
ಕುಂಬರಡಿ ಸ.ನಂ 116ರಲ್ಲಿ ಕೆಲವು ಗ್ರಾಮಸ್ಥರು ಇಲಾಖೆ 25 ಎಕರೆ ಅರಣ್ಯ ಇಲಾಖೆಯ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ಅದರಲ್ಲಿ ಗ್ರಾಮಸ್ಥರ ಮನವೊಲಿಸಿ 15 ಎಕರೆ ತೆರವುಗೊಳಿಸಿ ಇಲಾಖೆಯ ವಶಕ್ಕೆ ತೆಗೆದುಕೊಂಡು, ಜಾನುವಾರು ನಿರೋಧಕ ಕಂದಕ ಹೊಡೆಸಲಾಗಿದೆ.
ವಲಯ ಅರಣ್ಯ ಅಧಿಕಾರಿ ಎಚ್.ಆರ್.ಹೇಮಂತ್ ಕುಮಾರ್, ಉಪವಲಯ ಅರಣ್ಯಾಧಿಕಾರಿ ಮಹದೇವಪ್ಪ, ಗಸ್ತು ಅರಣ್ಯಪಾಲಕರಾದ ಉಮೇಶ್, ಅರಣ್ಯ ವೀಕ್ಷಕರಾದ ಲೋಕೇಶ್ ಮತ್ತು ಅರಣ್ಯ ಸಿಬ್ಬಂದಿ ಇದ್ದರು.
ಎಚ್.ಆರ್.ಹೇಮಂತ್ ಕುಮಾರ್ ಅವರ 13 ತಿಂಗಳ ಅವಧಿಯಲ್ಲಿ ಮಡಿದಿಣೆ ಸ.ನಂ. 76ರಲ್ಲಿ ಕಾಡಮನೆಯಲ್ಲಿ 22.03 ಎಕರೆ, ಸ.ನಂ. 162ರಲ್ಲಿ 10 ಎಕರೆ ಸೇರಿದಂತೆ ಒಟ್ಟು 47.03 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.