ADVERTISEMENT

ಟ್ರಾಮಾ ಸೆಂಟರ್‌ಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 15:03 IST
Last Updated 8 ಏಪ್ರಿಲ್ 2022, 15:03 IST
ಹಾಸನದ ಎಂ.ಕೃಷ್ಣ ಅಂಧ ಮಕ್ಕಳ ಶಾಲೆ ಹಿಂಭಾಗ ಟ್ರಾಮಾ ಸೆಂಟರ್‌ ಕಟ್ಟಡ ಕಾಮಗಾರಿಗೆ ಪರಮೇಶ್ವರಪ್ಪ ಭೂಮಿಪೂಜೆ ನೆರವೇರಿಸಿದರು. ಡಾ.ಬಿ.ಸಿ.ರವಿಕುಮಾರ್, ಬಿ.ವಿ.ಕರೀಗೌಡ ಇದ್ದಾರೆ
ಹಾಸನದ ಎಂ.ಕೃಷ್ಣ ಅಂಧ ಮಕ್ಕಳ ಶಾಲೆ ಹಿಂಭಾಗ ಟ್ರಾಮಾ ಸೆಂಟರ್‌ ಕಟ್ಟಡ ಕಾಮಗಾರಿಗೆ ಪರಮೇಶ್ವರಪ್ಪ ಭೂಮಿಪೂಜೆ ನೆರವೇರಿಸಿದರು. ಡಾ.ಬಿ.ಸಿ.ರವಿಕುಮಾರ್, ಬಿ.ವಿ.ಕರೀಗೌಡ ಇದ್ದಾರೆ   

ಹಾಸನ: ವೈದ್ಯ ಗುರುರಾಜ್ ಹೆಬ್ಬಾರ್ ಅವರ ಕನಸಿನ ಕೂಸುಟ್ರಾಮಾ ಸೆಂಟರ್ ಕಟ್ಟಡದ ಶಂಕುಸ್ಥಾಪನೆಯನ್ನು ಶುಕ್ರವಾರ ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ ಮತ್ತು ಹಿಮ್ಸ್‌ ನಿರ್ದೇಶಕ ಡಾ.ಬಿ.ಸಿ.ರವಿಕುಮಾರ್‌ ನೆರವೇರಿಸಿದರು.

ನಗರದ ಸಾಲಗಾಮೆ ರಸ್ತೆಯ ಎಂ. ಕೃಷ್ಣ ಅಂಧ ಮಕ್ಕಳ ಶಾಲೆ ಹಿಂಭಾಗದಜನಕಲ್ಯಾಣ ರಿಸರ್ಚ್ ಅಂಡ್ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಟ್ರಾಮಾಸೆಂಟರ್‌ ನಿರ್ಮಿಸಲಾಗುತ್ತಿದೆ.

ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ ಮಾತನಾಡಿ, ‘ಕಡಿಮೆ ಬೆಲೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲು ಟ್ರಸ್ಟ್‌ನಿಂದ ಟ್ರಾಮಾ ಸೆಂಟರ್ ನಿರ್ಮಿಸಲಾಗುತ್ತಿದ್ದು, ಹಾಸನದ ಜನತೆ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ADVERTISEMENT

ಡಾ.ಬಿ.ಸಿ.ರವಿಕುಮಾರ್ ಮಾತನಾಡಿ, ‘ಬಡ ಜನರಿಗೆ ಕೈಗೆಟಕುವ ಬೆಲೆಯಲ್ಲಿ ಚಿಕಿತ್ಸೆ ಸಿಗಬೇಕು ಎನ್ನುವ ನಿಟ್ಟಿನಲ್ಲಿ ₹3 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸೆಂಟರ್‌ ನಿರ್ಮಿಸಲಾಗುತ್ತಿದೆ. ಸರ್ಕಾರದಿಂದಲೂ ನೆರವು ಸಿಗಬೇಕಾಗಿದೆ’ ಎಂದು ತಿಳಿಸಿದರು.

ಟ್ರಸ್ಟ್ ಅಧ್ಯಕ್ಷ ಬಿ.ವಿ.ಕರೀಗೌಡಮಾತನಾಡಿ, ‘ಬಡ ರೋಗಿಗಳಿಗೆ ನೆರವಾಗಬೇಕೆಂಬ ಉದ್ದೇಶದಿಂದ ಈ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಟ್ರಾಮಾ ಸೆಂಟರ್‌ ನಿರ್ಮಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ’ ಎಂದು ನುಡಿದರು.

ಟ್ರಸ್ಟ್ ಖಜಾಂಚಿ ಸಣ್ಣ ಮಂಜೇಗೌಡ, ಸಂಘಟನಾ ಕಾರ್ಯದರ್ಶಿ ಬಿ.ಕೆ. ಶಾಮರಾಜು, ಸದಸ್ಯರಾದ ಮಂಜೇಗೌಡ, ದಲಿಚಂದ್‌ ಎಂ. ಜೈನ್, ಎಚ್.ಆರ್. ನೇತ್ರಾವತಿ ಬಸವರಾಜು, ಚಂದ್ರಶೇಖರ್, ಡಿ.ಎಸ್. ಬಸವರಾಜು, ಕಾವ್ಯಾ, ತೇಜವತಿ ನಾಗೇಂದ್ರ, ಡಾ. ಆರ್.ಎಚ್. ಅನಂತರಾಮು, ಗಿರಿಗೌಡ, ರತ್ನಮ್ಮ ಕೃಷ್ಣೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.