ಸಕಲೇಶಪುರ: ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಗಗನ್ ಹಾಡ್ಲಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಜಯಕುಮಾರ್ ಅವರನ್ನು ಬುಧವಾರ ನೇಮಕ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಸುನಿಲ್, ಸುಮನ್ ಹೆತ್ತೂರು, ಶಿವಕುಮಾರ್ ತಡಕಲು, ಕೃಷ್ಣಪ್ಪ ಪೂಜಾರಿ ತಾಲ್ಲೂಕು ಯುವ ಘಟಕದ ಅಧ್ಯಕ್ಷರಾಗಿ ಕೆ.ಎಂ. ಯಶಸ್ ಕೌಡಳ್ಳಿ, ಉಪಾಧ್ಯಕ್ಷರಾಗಿ ವಿ.ಆರ್. ಪ್ರಜ್ವಲ್, ನಗರ ಘಟಕದ ಅಧ್ಯಕ್ಷರಾಗಿ ಹೇಮಂತ್ ಗೌಡ, ಉಪಾಧ್ಯಕ್ಷರಾಗಿ ನಿಶ್ಚಯ್ ಜಾನಕೆರೆ, ಕಸಬಾ ಹೋಬಳಿ ಘಟಕದ ಅಧ್ಯಕ್ಷರಾಗಿ ಸಿದ್ದಾರ್ಥ್ ಪಟೇಲ್, ಉಪಾಧ್ಯಕ್ಷರಾಗಿ ಸೃಜನ್ ಗೌಡ, ಹಾನುಬಾಳು ಹೋಬಳಿ ಘಟಕದ ಅಧ್ಯಕ್ಷರಾಗಿ ಹೆಚ್.ಎಲ್. ಗಗನ್ ಹುರುಡಿ, ಉಪಾಧ್ಯಕ್ಷರಾಗಿ ಅಪೂರ್ವ ದೇವಲಕೆರೆ. ಯಸಳೂರು ಹೋಬಳಿ ಘಟಕದ ಅಧ್ಯಕ್ಷರಾಗಿ ಸಂತೋಷ್ ಅಡ್ರಹಳ್ಳಿ, ಉಪಾಧ್ಯಕ್ಷರಾಗಿ ಚಂದ್ರಶೇಖರ್ ಡಡಕೇರಿ
ಆಟೊ ಘಟಕದ ಅಧ್ಯಕ್ಷರಾಗಿ ಸೋಮಶೇಖರ್ (ಸ್ವಾಮಿ) ಉಪಾಧ್ಯಕ್ಷರಾಗಿ ಸಂತೋಷ, ಮಹೇಶ್, ಯೋಗೇಶ್ ಹೆತ್ತೂರು ಹೋಬಳಿ ಘಟಕದ ಅಧ್ಯಕ್ಷರಾಗಿ ದೀಪಕ್ ಹೆತ್ತೂರು ಉಪಾಧ್ಯಕ್ಷರಾಗಿ ಪವನ್ ಗೌಡ ಆಯ್ಕೆ ಆದರು.
ನೂತನ ಪದಾಧಿಕಾರಿಗಳ ಪದವಿ ಪ್ರದಾನ ಸಮಾರಂಭದಲ್ಲಿ ಹಾಸನ ಜಿಲ್ಲಾ ಕರವೇ ಅಧ್ಯಕ್ಷ ಸಿ.ಡಿ ಮನು ಕುಮಾರ್, ಸಲೇಶಪುರ ತಾಲ್ಲೂಕು ಮಾಜಿ ಅಧ್ಯಕ್ಷ ದಿನೇಶ್, ಸಕಲೇಶಪುರ–ಆಲೂರು ಉಸ್ತುವಾರಿ ರಘು ಪಾಳ್ಯ, ಆಲೂರು ತಾಲ್ಲೂಕು ಅಧ್ಯಕ್ಷ ನಟರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.