ADVERTISEMENT

ಹಾಸನ ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 14:17 IST
Last Updated 3 ಸೆಪ್ಟೆಂಬರ್ 2021, 14:17 IST
ಹಾಸನದಲ್ಲಿ ಮಳೆ ಸುರಿದ ವೇಳೆ  ಬಿ.ಎಂ. ರಸ್ತೆಯಲ್ಲಿ ವಾಹನ ಸಂಚಾರ ದೃಶ್ಯ.
ಹಾಸನದಲ್ಲಿ ಮಳೆ ಸುರಿದ ವೇಳೆ  ಬಿ.ಎಂ. ರಸ್ತೆಯಲ್ಲಿ ವಾಹನ ಸಂಚಾರ ದೃಶ್ಯ.   

ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶುಕ್ರವಾರ ಉತ್ತಮ ಮಳೆಯಾಗಿದೆ.

ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು.ಮಧ್ಯಾಹ್ನ 3.30ಕ್ಕೆ ನಗರದಲ್ಲಿ ಆರಂಭವಾದ ಮಳೆ ಒಂದು ತಾಸು ಸುರಿಯಿತು. ಭಾರಿ ಮಳೆಗೆ ಬಿ.ಎಂ ರಸ್ತೆ, ಮಹಾವೀರ ವೃತ್ತ, ರೈಲ್ವೆ ಮೇಲ್ಸೇತುವೆ ರಸ್ತೆಯಲ್ಲಿ ನೀರು ನಿಂತು ವಾಹನಗಳ ಸಂಚಾರದಲ್ಲಿ ವ್ಯತ್ಯಯವಾಯಿತು.

ಬೀದಿ ಬದಿ ವ್ಯಾಪಾರಿಗಳಿಗೂ ತೊಂದರೆ ಉಂಟಾಯಿತು. ಸಂಜೆ 6.30ರ ಬಳಿಕವೂ ಜಿಟಿಜಿಟಿ ಮಳೆಯಾಯಿತು.

ADVERTISEMENT

ಆಲೂರು, ಸಕಲೇಶಪುರ, ಬೇಲೂರು ಭಾಗದಲ್ಲಿ ಸಾಧಾರಣ ಮಳೆಯಾದರೆ, ಹಿರೀಸಾವೆ, ಹಳೇಬೀಡು, ಶ್ರವಣಬೆಳಗೊಳದಲ್ಲಿ ಒಂದು ಗಂಟೆಗೂ ಹೆಚ್ಚು ಮಳೆ ಸುರಿದಿದೆ. ಚನ್ನರಾಯಪಟ್ಟಣದಲ್ಲಿ ಗುರುವಾರ ರಾತ್ರಿ ಆರಂಭವಾದ ಮಳೆ ಬೆಳಗಿನ ಜಾವದವರೆಗೂ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.