ಅರಸೀಕೆರೆ: ಸರ್ಕಾರ ನೀಡುವ ಸೌಲಭ್ಯಗಳನ್ನು ಅರ್ಹ ರೈತರಿಗೆ ತಲುಪಿಸಿ, ಸಹಕಾರ ಸಂಘಗಳ ಅಧ್ಯಕ್ಷರು ಅವರ ಏಳಿಗೆಗೆ ಪ್ರಯತ್ನಿಸಬೇಕು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಶ್ಯಾನೆಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಆರ್.ಟಿ. ಬಸಪ್ಪ ರಂಗನಾಯಕನ ಕೊಪ್ಪಲು, ಉಪಾಧ್ಯಕ್ಷ ಕಣಿವೆ ನಾಯಕ್ ತಿಪ್ಪಘಟ್ಟ ಅವರನ್ನು ಅಭಿನಂದಿಸಿ ಮಾತನಾಡಿದರು.
‘ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಾಲ ನೀಡುವಲ್ಲಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಮಲತಾಯಿ ಧೋರಣೆ ನೀಡುತ್ತಿದ್ದು ಸಮರ್ಪಕವಾಗಿ ಸಾಲ ನೀಡಲಾಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷ ಬಸಪ್ಪ ಮಾತನಾಡಿ, ‘ಸಂಘದಲ್ಲಿರುವ ಸದಸ್ಯರು ಹಾಗೂ ಶಾಸಕರ ಮಾರ್ಗದರ್ಶನದಂತೆ ಸಂಘವನ್ನು ಬಲಪಡಿಸಿ ರೈತರಿಗೆ ಅನುಕೂಲ ಮಾಡಿಕೊಡುತ್ತೇನೆ’ ಎಂದು ಹೇಳಿದರು
ಪ್ರಾಥಮಿಕ ಕೃಷಿ ಪತ್ತಿನ ಸದಸ್ಯರುಗಳಾದ ಶ್ಯಾನೆಗೆರೆ ಬಾಬು,ಜಿ.ಟಿ ತಿಮ್ಮಪ್ಪ, ವಿಜಯ್ ಕುಮಾರ್, ಮರಿ ಸಂಕಪ್ಪ, ಶ್ರೀನಿವಾಸ್ ಷಣ್ಮುಖ, ಶಶಿಕುಮಾರ್, ಶ್ರುತಿ ಮಂಜು,ರೀಟ ಸಿದ್ದೇಶ್,ರಂಗನಾಥ್, ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.