ADVERTISEMENT

ಬೇಲೂರು ತಾಲ್ಲೂಕು ನಿಟ್ಟೂರು ಗ್ರಾಮದಲ್ಲಿ ಕಾಲಸಂಕ ಸೇತುವೆ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 5:37 IST
Last Updated 28 ಫೆಬ್ರುವರಿ 2026, 5:37 IST
ಬೇಲೂರು ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಕಾಲಸಂಕ ಸೇತುವೆ ನಿರ್ಮಾಣಕ್ಕೆ ಶಾಸಕ ಎಚ್.ಕೆ.ಸುರೇಶ್ ಭೂಮಿಪೂಜೆ ಸಲ್ಲಿಸಿದರು 
ಬೇಲೂರು ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಕಾಲಸಂಕ ಸೇತುವೆ ನಿರ್ಮಾಣಕ್ಕೆ ಶಾಸಕ ಎಚ್.ಕೆ.ಸುರೇಶ್ ಭೂಮಿಪೂಜೆ ಸಲ್ಲಿಸಿದರು    

ಬೇಲೂರು: ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಕಾಲಸಂಕ ಸೇತುವೆ ನಿರ್ಮಿಣಕ್ಕೆ ಶಾಸಕ ಎಚ್.ಕೆ.ಸುರೇಶ್ ಭೂಮಿಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ‘ಗ್ರಾಮಸ್ಥರು ಜಾನುವಾರುಗಳೊಂದಿಗೆ ತಮ್ಮ ಜಮೀನುಗಳಿಗೆ ತೆರಳಲು ಅನುಕೂಲವಾಗುವಂತೆ ಹಾಗೂ ನಿಟ್ಟೂರು ಗ್ರಾಮದಿಂದ ಮುಗುಳವಳ್ಳಿ ಗ್ರಾಮಕ್ಕೆ ತೆರಳಲು ₹30 ಲಕ್ಷ ಅನುದಾನದಲ್ಲಿ ಕಾಲಸಂಕ ಸೇತುವೆ ನಿರ್ಮಿಸಲಾಗುತ್ತಿದೆ. ಮಳೆಗಾಲದ ಸಂದರ್ಭ ಹಳ್ಳಗಳಲ್ಲಿ ಹೆಚ್ಚಿನ ನೀರು ಹರಿಯುವುದರಿಂದ ಜನರು ಮತ್ತು ಜಾನುವಾರುಗಳು ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಅವರ ಬವಣೆಯನ್ನು ನಿವಾರಿಸಲಾಗುತ್ತಿದೆ’ ಎಂದರು.

ಬಿಜೆಪಿ ಮುಖಂಡ ಸನ್ಯಾಸಿಹಳ್ಳಿ ನರೇಂದ್ರ, ಗ್ರಾಮಸ್ಥರಾದ ಧರ್ಮೇಶ, ಪುಟ್ಟಸ್ವಾಮಿಗೌಡ, ಅಶೋಕ್, ಪ್ರದೀಪ್, ಲಕ್ಷ್ಮಣ್, ಜಗದೀಶ್, ಸೋಮೇಶ್, ಕುಮಾರ್, ಶ್ರೀನಿವಾಸ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ದರ್ಶನ್, ಗುತ್ತಿಗೆದಾರ ಮಹೆಶ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.