
ಹೊಳೆನರಸೀಪುರ: ತಾಲ್ಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಬಿ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾಗಿ ರಾಮಕೃಷ್ಣ ಆಯ್ಕೆಯಾದರು.
ಪದಾಧಿಕಾರಿಗಳ ಆಯ್ಕೆಗೆ ಭಾನುವಾರ ಚುನಾವಣೆ ನಡೆಯಿತು. ಕಾರ್ಯದರ್ಶಿಯಾಗಿ ಅಭಿಲಾಷ್, ಖಜಾಂಚಿಯಾಗಿ ಎಲ್.ಚಂದ್ರಶೇಖರ್ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಸಮ ಮತಗಳನ್ನು ಪಡೆದ ಎಚ್.ಜಿ.ವೆಂಕಟೇಶ್, ಡಿ.ಕೆ.ವಸಂತಯ್ಯ ಅವರಿಗೆ ತಲಾ ಒಂದೂವರೆ ವರ್ಷ ಅಧಿಕಾರ ನೀಡಲು ಸದಸ್ಯರು ನಿರ್ಧರಿಸಿದರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರ್ಷ, ಭಾನುಮತಿ, ವಿಶ್ವನಾಥ್, ದನಂಜಯ, ಕೆ.ಎಸ್.ಚಂದ್ರು, ಅವಿರೋಧವಾಗಿ ಆಯ್ಕೆ ಆದರು. ಚುನಾವಣಾಧಿಕಾರಿಯಾಗಿ ಸುವರ್ಣಹರೀಶ್ ಹಾಗೂ ನಾಗರಾಜು ಕಾರ್ಯನಿರ್ವಹಿಸಿದರು. ಜಿಲ್ಲಾ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯ ಎಚ್.ವಿ.ಸುರೇಶ್ ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.