ಹಳೇಬೀಡು: ಕಾಗೇದಹಳ್ಳಕ್ಕೆ ಎತ್ತಿನಹೊಳೆ ಯೋಜನೆಯ ನೀರು ಬಿಟ್ಟಿರುವುದರಿಂದ ದ್ವಾರಸಮುದ್ರ ಕೆರೆಗೆ ದಿಢೀರನೆ ನೀರು ಬಂದಿದೆ. ಶೇ 80ರಷ್ಟು ಭರ್ತಿಯಾಗಿದ್ದ ಕೆರೆ ಯಾವ ಕ್ಷಣದಲ್ಲಾದರೂ ಕೋಡಿ ಬೀಳುವ ಹಂತಕ್ಕೆ ತಲುಪಿದೆ.
ಕಳೆದ ವರ್ಷದಂತೆ ಜುಲೈ ತಿಂಗಳಿನಲ್ಲಿ ಕೆರೆ ಕೋಡಿ ಬೀಳಬಹುದು ಎಂದು ಜನರು ನಿರೀಕ್ಷಿಸಿದ್ದರು. ಎತ್ತಿನಹೊಳೆ ನೀರು ಹರಿಯುತ್ತಿರುವ ಪ್ರಭಾವ ದ್ವಾರಸಮುದ್ರ ಕೆರೆಗೆ ವೇಗವಾಗಿ ನೀರು ಹರಿಯುತ್ತಿದೆ.
ದ್ವಾರಸಮುದ್ರ ಕೆರೆ ಭರ್ತಿಯಾಗಿದ್ದರಿಂದ ಕಳೆದ ವರ್ಷ ಅಂತರ್ಜಲ ಸಮಸ್ಯೆ ಕಾಡಲಿಲ್ಲ. ಈ ವರ್ಷ ಸಹ ಕೊಳವೆ ಬಾವಿಗಳಲ್ಲಿ ಸಮೃದ್ಧ ನೀರು ಬರುತ್ತದೆ. ಅಡಿಕೆ, ತೆಂಗಿನ ತೋಟಗಳು ಉಳಿಯುತ್ತವೆ ಎಂದು ರೈತ ಕುಮಾರಪುತ್ರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.