ಹೆತ್ತೂರು: ಯಸಳೂರು ಹೋಬಳಿ ಯಡಕೆರೆ ಗ್ರಾಮದ ಕಾಫಿ ಬೆಳೆಗಾರ ವೈ.ಕೆ. ಸುಬ್ಬೆಗೌಡರ ಕಾಫಿ ತೋಟಕ್ಕೆ ಅಂಟು ದ್ರಾವಣದ ಬದಲು ಕಳೆನಾಶಕವನ್ನು ಸಿಂಪಡಿಸಿ ಕಾಫಿ ಗಿಡ ನಾಶವಾಗಿರುವ ಮಾಹಿತಿ ಹಿನ್ನೆಲೆಯಲ್ಲಿ ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ವಿಜ್ಞಾನಿಗಳು ಭೇಟಿ ನೀಡಿ ಪರಿಶೀಲಿಸಿದರು.
ಭಾರತೀಯ ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜೆ ದಿನೇಶ ಸೂಚನೆ ಮೇರೆಗೆ ತಂಡ ಭೇಟಿ ನೀಡಿತು. ವಿಭಾಗದ ಮುಖ್ಯಸ್ಥ ಡಾ.ಬಾಬು ಸಿ., ಬೇಸಾಯ ವಿಭಾಗದ ಡಾ.ಸೌಂದರ ರಾಜನ್, ಸಸ್ಯರೋಗ ವಿಭಾಗದ ಡಾ.ಸೋಮಶೇಖರ್ ಗೌಡ ಪಟೇಲ್, ಸಸ್ಯ ರೋಗ ಶಾಸ್ತ್ರ ವಿಭಾಗದ ಸಂಶೋಧನಾ ಸಹಾಯಕ ಡಾ. ಬಾಬು ಸಿ., ಸಸ್ಯ ಶರೀರಶಾಸ್ತ್ರ ವಿಭಾಗದ ಪ್ರದೀಪ್ ಎಸ್.ಡಿ., ಕಾಫಿ ಮಂಡಳಿ ವಿಸ್ತರಣಾ ನಿರೀಕ್ಷಕರಾದ ಶ್ವೇತಾ ಕೆ., ಪ್ರದೀಪ್, ಯಸಳೂರು ಹೋಬಳಿ ಬೆಳೆಗಾರರ ಅಧ್ಯಕ್ಷ ಕೆ.ಬಿ. ಗಂಗಾಧರ, ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.