
ಪ್ರಜಾವಾಣಿ ವಾರ್ತೆ
ಹಾಸನ: ಇಲ್ಲಿನ ಹಾಸನಾಂಬೆ ದೇವಿಯ ದರ್ಶನಕ್ಕೆ ಒಂದು ದಿನವಷ್ಟೆ ಬಾಕಿ ಉಳಿದಿದೆ. ಮಂಗಳವಾರ ಬೆಳಿಗ್ಗೆಯವರೆಗೆ ಒಟ್ಟು 23 ಲಕ್ಷ ಮಂದಿ ದೇವಿಯ ದರ್ಶನ ಪಡೆದಿದ್ದಾರೆ.
‘ಟಿಕೆಟ್, ಲಡ್ಡು ಪ್ರಸಾದ ಮಾರಾಟದಿಂದ ಇಲ್ಲಿಯವರೆಗೆ ₹20 ಕೋಟಿ ಆದಾಯ ಬಂದಿದೆ’ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ತಿಳಿಸಿದರು.
ದೇಗುಲದಲ್ಲಿ ಮಂಗಳವಾರದಿಂದ ಶಿಷ್ಟಾಚಾರದ ದರ್ಶನಕ್ಕೆ ಕಡಿವಾಣ ಹಾಕಲಾಗಿತ್ತು. ಮಂಗಳವಾರ ಗಣ್ಯರು ಟಿಕೆಟ್ ಪಡೆದುಕೊಂಡೇ ದೇವಿಯ ದರ್ಶನ ಪಡೆದರು.
‘ಬುಧವಾರ (ಅ.22) ಸಂಜೆ 7ರವರೆಗೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಗುರುವಾರ ಮಧ್ಯಾಹ್ನ 12.30ಕ್ಕೆ ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ಬಂದ್ ಮಾಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.