ADVERTISEMENT

ಅಧಿದೇವತೆ ಹಾಸನಾಂಬೆ ವಿಶ್ವರೂಪ ದರ್ಶನ: ಭಕ್ತರ ಜಯಘೋಷ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2021, 9:24 IST
Last Updated 28 ಅಕ್ಟೋಬರ್ 2021, 9:24 IST
ತಳವಾರ ವಂಶಸ್ಥ ನರಸಿಂಹರಾಜ ಅರಸ್ ದೇವಾಲಯದ ಬಾಗಿಲು ಎದುರು ಪೂಜೆ ಸಲ್ಲಿಸಿ ಬಾಳೆ ಕಂದು ಕತ್ತರಿಸಿದರು.
ತಳವಾರ ವಂಶಸ್ಥ ನರಸಿಂಹರಾಜ ಅರಸ್ ದೇವಾಲಯದ ಬಾಗಿಲು ಎದುರು ಪೂಜೆ ಸಲ್ಲಿಸಿ ಬಾಳೆ ಕಂದು ಕತ್ತರಿಸಿದರು.   

ಹಾಸನ: ಭಕ್ತರ ಜಯಘೋಷದ ನಡುವೆ ನಗರದ ಅಧಿದೇವತೆ ಹಾಸನಾಂಬೆ ವರ್ಷದ ನಂತರ ಗುರುವಾರ ವಿಶ್ವರೂಪ ದರ್ಶನ ಕರುಣಿಸಿದಳು.

ಸಂಪ್ರದಾಯದಂತೆ ತಳವಾರ ವಂಶಸ್ಥ ನರಸಿಂಹರಾಜ ಅರಸ್ ದೇವಾಲಯದ ಬಾಗಿಲು ಎದುರು ಪೂಜೆ ಸಲ್ಲಿಸಿ ಬಾಳೆ ಕಂದು ಕತ್ತರಿಸಿದ ನಂತರ ಮುಖ್ಯ ಅರ್ಚಕರು ಮಧ್ಯಾಹ್ನ 12.19ಕ್ಕೆ ಆದಿಚುಂಚನಗಿರಿ ಕ್ಷೇತ್ರದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗರ್ಭಗುಡಿ ಬಾಗಿಲಿಗೆ ವರ್ಷದ ಹಿಂದೆ ಹಾಕಿದ್ದ ಬೀಗ ತೆರೆದರು.

ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಂ ಜೆ.ಗೌಡ, ಜಿಲ್ಲಾಧಿಕಾರಿ ಆರ್.ಗಿರೀಶ್, ಎಸ್ಪಿ ಆರ್.ಶ್ರೀನಿವಾಸ್ ಗೌಡ ಸೇರಿದಂತೆ ಪ್ರಮುಖರು ಆಭರಣಾಲಂಕಾರವಿಲ್ಲದ ದೇವಿಯ ವಿಶ್ವರೂಪ ದರ್ಶನ ಪಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.