ADVERTISEMENT

ಹಾಸನದಲ್ಲಿ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 15:39 IST
Last Updated 9 ಜುಲೈ 2019, 15:39 IST
ಹಾಸನದಲ್ಲಿ ಮಂಗಳವಾರ ಮಳೆ ಸುರಿದ ವೇಳೆ ರೈಲು ನಿಲ್ದಾಣದಲ್ಲಿ ಮಂಜು ಮುಸುಕಿದ ವಾತಾವರಣ ಕಂಡು ಬಂತು.
ಹಾಸನದಲ್ಲಿ ಮಂಗಳವಾರ ಮಳೆ ಸುರಿದ ವೇಳೆ ರೈಲು ನಿಲ್ದಾಣದಲ್ಲಿ ಮಂಜು ಮುಸುಕಿದ ವಾತಾವರಣ ಕಂಡು ಬಂತು.   

ಹಾಸನ : ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ.

ಬೆಳಗ್ಗೆಯಿಂದ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ 3 ಗಂಟೆಗೆ ಆರಂಭಗೊಂಡ ಜಿಟಿಜಿಟಿ ಮಳೆ ಸಂಜೆ ವರೆಗೂ ಸುರಿಯಿತು. ಸಂಜೆ ಅರ್ಧ ತಾಸು ಬಿಡುವು ನೀಡಿತು. ನಂತರ ಬಿಟ್ಟು ಬಿಟ್ಟು ಸುರಿಯಿತು. ಕೆಲವು ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.

ರೈಲು ನಿಲ್ದಾಣ ರಸ್ತೆ, ಬಿ.ಎಂ. ರಸ್ತೆಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಆಯಿತು. ಶಾಲಾ, ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿಯೇ ತೊಯ್ದುಕೊಂಡು ಮನೆಗೆ ಹೋದರು. ‌

ADVERTISEMENT

ಕೆಲವರು ಮಳೆಯಿಂದ ರಕ್ಷಣೆ ಪಡೆಯಲು ಕಟ್ಟಡ, ಬಸ್‌ ತಂಗುದಾಣಗಳ ಬಳಿ ಆಶ್ರಯ ಪಡೆದರು. ಮಳೆ ನಿಲ್ಲುವ ಸೂಚನೆ ಕಂಡು ಬರಲಿಲ್ಲ. ಆಗ ತೊಯ್ದುಕೊಂಡು ಹೋದರು.

ದೂರದ ಊರುಗಳಿಂದ ನಗರಕ್ಕೆ ಬಂದಿದ್ದವರು ಸಾಕಷ್ಟು ಪರದಾಡಿದರು. ನಗರದ ಮಾರುಕಟ್ಟೆಯಲ್ಲಿ ಮಳೆ ನೀರು ನಿಂತು ಗ್ರಾಹಕರು ತೊಂದರೆ ಅನುಭವಿಸಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.