
ನುಗ್ಗೇಹಳ್ಳಿ ಹೋಬಳಿಯ ಅಗ್ರಹಾರ ಬೆಳಗುಲಿ ಗ್ರಾಮದಲ್ಲಿ ಏರ್ಪಡಿಸಿದ್ದ ಹೈನುಗಾರಿಕೆ ತರಬೇತಿ ಶಿಬಿರ ಹಾಗೂ ಬರಡು ರಾಸು ಚಿಕಿತ್ಸೆ ಹಾಗೂ ಆರೋಗ್ಯ ತಪಾಸಣಾ ಶಿಬಿರದಲ್ಲಿ ರೈತರಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು
ನುಗ್ಗೇಹಳ್ಳಿ: ಹೋಬಳಿಯ ಅಗ್ರಹಾರ ಬೆಳಗುಲಿ ಗ್ರಾಮದಲ್ಲಿ ಕೊಟಕ್ ಮಹಿಂದ್ರ ಬ್ಯಾಂಕ್ ಬೈಫ್ ಸಂಸ್ಥೆ ಹಾಗೂ ಅಕ್ಕನಹಳ್ಳಿ ಸಮಗ್ರ ಜಾನುವಾರು ಅಭಿವೃದ್ಧಿ ಯೋಜನೆ ವತಿಯಿಂದ ನುಗ್ಗೇಹಳ್ಳಿ ಪಶುಪಾಲನ ಹಾಗೂ ಪಶುಸಂಗೋಪನ ಸೇವಾ ಇಲಾಖೆ ಸಹಯೋಗದಲ್ಲಿ ರೈತರ ಹೈನುಗಾರಿಕೆ ತರಬೇತಿ ಶಿಬಿರ ಹಾಗೂ ಬರಡು ರಾಸು ಚಿಕಿತ್ಸೆ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಬೈಫ್ ಸಂಸ್ಥೆಯ ಯೋಜನಾ ಸಂಯೋಜಕ ಶಂಕರಪ್ಪ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಹೈನೋದ್ಯಮದ ರೈತರಿಗೆ ನೆರವಾಗುವ ದೃಷ್ಟಿಯಿಂದ ಯೋಜನೆಯಿಂದ ತರಬೇತಿ ಹಾಗೂ ರಸಮೇವು ಮಾಡುವ ಪ್ರಾತ್ಯಕ್ಷಿಕೆ ಸವಲತ್ತುಗಳ ಬಗ್ಗೆ ತಿಳಿಸಲಾಗುತ್ತಿದೆ. ಈ ಕಾರ್ಯಕ್ರಮದಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ’ ಎಂದರು.
ನಿವೃತ್ತ ಪಶು ವೈದ್ಯಾಧಿಕಾರಿ ಡಾ.ಸಿಎಂ ಸಿದ್ದಲಿಂಗಯ್ಯ ಮಾತನಾಡಿ, ಕೃತಕ ಗರ್ಭಧಾರಣೆ ಮಹತ್ವ ಹೈನುಗಾರಿಕೆಯಲ್ಲಿ ಮೇವು ಅಭಿವೃದ್ಧಿ ಏಕದಳ ದ್ವಿದಳ ಹಾಗೂ ಮರ ಮೇವುಗಳ ಮಹತ್ವ ಕರುಗಳ ಸಾಕಾಣಿಕೆ ಗರ್ಭ ಧರಿಸಿದ ಹಸುಗಳ ಪಾಲನೆ ಬಗ್ಗೆ ಮಾಹಿತಿ ನೀಡಿದರು.
ನುಗ್ಗೇಹಳ್ಳಿ ಪಶು ವೈದ್ಯಾಧಿಕಾರಿ ಡಾ.ಎಸ್ ಶ್ರೇಯಸ್, ರೇಬಿಸ್ ನಿಯಂತ್ರಣದ ಕುರಿತು ಮಾಹಿತಿ ನೀಡಿದರು.
ತರಬೇತಿಯ ನಂತರ ಎಲ್ಲಾ ಜಾನುವಾರುಗಳಿಗೆ ಹಾಗೂ ಬರಡು ರಾಸುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಕರುಗಳಿಗೆ ಜಂತುನಾಶಕ ಔಷಧಿ ನೀಡಲಾಯಿತು.
ಗ್ರಾಮದ ಮುಖಂಡರಾದ ಮಂಜೇಗೌಡ ಶಿವನಗೌಡ, ಸುರೇಶ್ ಬಿ.ಡಿ, ಉಪೇಂದ್ರ ಬಿ, ಕೃತಕ ತಂತ್ರಜ್ಞ ಕುಮಾರ್, ಗ್ರಾಮಸ್ಥರು ಇದ್ದರು.
ರೇಬಿಸ್ ರೋಗದ ಬಗ್ಗೆ ಭಯ ಬೇಡ. ರೋಗಕ್ಕೆ ಲಸಿಕೆ ಇದೆ ರೈತರಲ್ಲಿ ಜಾಗೃತಿ ಮೂಡಿಸುವ ಅವಶ್ಯಕತೆ ಇದೆಡಾ.ಎಸ್ ಶ್ರೇಯಸ್ ನುಗ್ಗೇಹಳ್ಳಿ ಪಶು ವೈದ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.