ಅತ್ಯಾಚಾರ
ಸಾಂದರ್ಭಿಕ ಚಿತ್ರ
ಹಾಸನ: ನಗರದಲ್ಲಿ ಬುದ್ಧಿಮಾಂದ್ಯ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿರುವ ಆರೋಪಿಗಳು, ಕೃತ್ಯದ ವಿಡಿಯೊ ಮಾಡಿ ಸಂತ್ರಸ್ತೆಯ ಸಹೋದರನಿಗೆ ಕಳುಹಿಸಿದ್ದಾರೆ.
ಸಂತ್ರಸ್ತೆ ಸಹೋದರ ಪೊಲೀಸರಿಗೆ ದೂರು ನೀಡಿದ್ದು, ‘ಆರೋಪಿಗಳಾದ ಅಬ್ದುಲ್ ಅಫ್ತಾಬ್, ರಾಜಿಕ್ ಪಾಷಾ ಮತ್ತು ಉಮ್ರಾನ್ ಎಂಬುವವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಘಟನೆ ಎಲ್ಲಿ ನಡೆದಿದೆ? ಹೇಗೆ ನಡೆದಿದೆ ಎಂಬುದರ ಮಾಹಿತಿ ತಿಳಿದು ಬಂದಿಲ್ಲ. ಅತ್ಯಾಚಾರದ ವಿಡಿಯೊ ಆ.8 ರಂದು ಸಿಕ್ಕಿದೆ. ಕಳುಹಿಸಿದವನನ್ನು ವಿಚಾರಿಸಿದಾಗ, ಮತ್ತೊಬ್ಬನ ಹೆಸರು ಹೇಳಿ ವಿಡಿಯೊ ಡಿಲಿಟ್ ಮಾಡಿದ್ದಾನೆ’ ಎಂದು ದೂರಿದ್ದಾರೆ.
ಈ ಘಟನೆಯಿಂದ ತೀವ್ರ ನೊಂದಿರುವ ಕುಟುಂಬದವರು, ‘ಆರೋಪಿಗಳನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.