ಹಾಸನ: ಇಲ್ಲಿನ ನಗರಸಭೆಯಲ್ಲಿ ಜನನಿ ಫೌಂಡೇಶನ್ ಸಂಸ್ಥೆಯ ವತಿಯಿಂದ ಪೌರಕಾರ್ಮಿಕ ಮಹಿಳೆಯರೊಂದಿಗೆ ಅಂತರ ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.
ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಮಾತನಾಡಿ, ‘ಜನನಿ ಸಂಸ್ಥೆಯು ಇಂಥದ್ದೊಂದು ವಿಶೇಷ ಹಾಗೂ ಅರ್ಥಪೂರ್ಣ ಕಾರ್ಯಕ್ರಮ ಮಾಡುತ್ತಿರುವ ಶ್ಲಾಘನೀಯ. ಸಂಸ್ಥೆಯ ಒಳ್ಳೆಯ ಕೆಲಸ ಕಾರ್ಯಗಳ ಜೊತೆಗೆ ಪೌರಕಾರ್ಮಿಕ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲು ಸಹಾಯ ಮಾಡುತ್ತೇನೆ’ ಎಂದು ತಿಳಿಸಿದರು.
ಮಹಿಳಾ ದಿನಾಚರಣೆಯ ಆರಂಭ, ಮಹಿಳೆಯ ಮಹತ್ವ ಹಾಗೂ ಮಹಿಳೆಯ ಅಭಿವೃದ್ಧಿ ಹಾಗೂ ಸ್ಥಾನಮಾನಗಳ ಬಗ್ಗೆ ವಿವಿಧ ಗಣ್ಯರು ಮಾತನಾಡಿದರು.
ಜನನಿ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಮಾತನಾಡಿ, ‘ಕೇವಲ ವೇದಿಕೆಯ ಕಾರ್ಯಕ್ರಮ ಮಾಡುವುದು ನಮ್ಮ ಉದ್ದೇಶವಲ್ಲ. ಪರಿಸರ ಶುಚಿಯಾಗಿಟ್ಟು ನಮ್ಮ ನೆಮ್ಮದಿಗೆ ಕಾರಣವಾಗಿರುವ ಪೌರಕಾರ್ಮಿಕ ಮಹಿಳೆಯರಿಗೆ ಆಟೋಟಗಳ ಮೂಲಕ ಖುಷಿ ನೀಡಿ, ಅವರನ್ನು ಗೌರವಿಸಿ, ಅವರೊಂದಿಗೆ ಕಷ್ಟ– ಸುಖಗಳನ್ನು ಹಂಚಿಕೊಂಡು ಕಾರ್ಯಕ್ರಮ ಮಾಡುವುದು ನಮ್ಮ ಉದ್ದೇಶವಾಗಿತ್ತು’ ಎಂದು ತಿಳಿಸಿದರು.
ಪೌರಕಾರ್ಮಿಕ ಮಹಿಳೆಯರಿಗೆ ಮನರಂಜನೆಗಾಗಿ ಗ್ರಾಮೀಣ ಕ್ರೀಡೆಗಳನ್ನು ಆಡಿಸಿ, ಬಹುಮಾನ ವಿತರಿಸಲಾಯಿತು. ಪೌರಕಾರ್ಮಿಕ ಮಹಿಳೆಯರನ್ನು ಸನ್ಮಾನಿಸಲಾಯಿತು.
ಸಾಹಿತಿ ಶೈಲಜಾ ಹಾಸನ್, ರೆಡ್‌ಕ್ರಾಸ್ ಸಭಾಪತಿ ಹೆಮ್ಮಿಗೆ ಮೋಹನ್, ಮಮತಾ ನಟೇಶ್, ಗಿರಿ ಮೆಡಿಕಲ್ಸ್‌ನ ಗಿರಿಗೌಡರು, ಚೈತ್ರಾ ಮಂಜೇಗೌಡ, ಡಾ. ದಿನೇಶ್, ಎಂಜಿನಿಯರ್ ಕವಿತಾ, ನಾಗರಾಜ್ ಹೆತ್ತೂರ್, ಪಿಡಿಒ ಸೀಮಾ ಪಠಾಣ್, ಜೆ.ಸಿ. ಪ್ರಸಾದ್, ವೆಂಕಟೇಶ್, ಜನನಿ ಸಂಸ್ಥೆಯ ಪದಾಧಿಕಾರಿಗಳಾದ ರುಕ್ಮಿಣಿ, ಅನಿತಾ, ಚೈತ್ರಾ, ವಿನುತಾ, ಬಬಿತಾ, ಹರಣಿ, ವೀಣಾ, ಕಲಾವತಿ, ಸುಂದರಮ್ಮ, ಚಂದ್ರಮ್ಮ, ದಾಕ್ಷಾಯಿಣಿ, ಯಮುನಾ, ಸುನಿತಾ, ವಿಜಯಲಕ್ಷ್ಮಿ, ಉಮಕ್ಷಿ, ಸಾವಿತ್ರಿ, ನಾಗರತ್ನಾ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.