ADVERTISEMENT

ಹಾಸನಾಂಬ ದೇವಿ ದರ್ಶನದ ವೇಳೆ ಕರ್ತವ್ಯ ಲೋಪದ ಆರೋಪ: ಇಬ್ಬರು ಆರ್‌ಐ, ವಿಎಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 21:55 IST
Last Updated 12 ಅಕ್ಟೋಬರ್ 2025, 21:55 IST
<div class="paragraphs"><p>ಅಮಾನತು</p></div>

ಅಮಾನತು

   

ಹಾಸನ: ಹಾಸನಾಂಬ ದೇವಿ ದರ್ಶನದ ವೇಳೆ ಕರ್ತವ್ಯ ಲೋಪದ ಆರೋಪದ ಮೇಲೆ ಕಂದಾಯ ನಿರೀಕ್ಷಕರಾದ (ಆರ್‌ಐ) ಗೋವಿಂದರಾಜ್, ಯೋಗಾನಂದ್, ಗ್ರಾಮಲೆಕ್ಕಿಗರಾದ ಸಂತೋಷ್ ಅಂಬಿಗರ, ಶಿರಾಜ್ ಮಹಿಮಾ ಪಟೇಲ್ ಅವರನ್ನು ಅಮಾನತು ಮಾಡಲಾಗಿದೆ.

ಗೋಲ್ಡ್ ಕಾರ್ಡ್ ಕೌಂಟರ್‌ನಲ್ಲಿ ಕಾರ್ಡ್ ಸ್ಕ್ಯಾನ್ ಮಾಡದೇ ಭಕ್ತರನ್ನು ದೇವಾಲಯದ ಒಳಗಡೆಗೆ ಬಿಟ್ಟ ಆರೋಪದ ಮೇಲೆ ಅಮಾನತು ಮಾಡಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.

ADVERTISEMENT

ಗುರುತಿನ ಕಾರ್ಡ್ ದುರ್ಬಳಕೆ ಆರೋಪದಲ್ಲಿ ಮೊದಲದಿನ ಇಬ್ಬರು ವಾರ್ಡನ್‍ಗಳನ್ನು ಅಮಾನತು ಮಾಡಲಾಗಿತ್ತು.  

₹2.25 ಕೋಟಿ ಆದಾಯ: ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ 3ನೇ ದಿನವಾದ ಭಾನುವಾರ ಬೆಳಿಗ್ಗೆ 8 ಗಂಟೆ ವೇಳೆಗೆ ದೇವಾಲಯಕ್ಕೆ ₹2.25 ಕೋಟಿ ಆದಾಯ ಬಂದಿದೆ. ಇದುವರೆಗೆ 3.50 ಲಕ್ಷ ಜನರು ದೇವಿಯ ದರ್ಶನ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.