
ಹಿರೀಸಾವೆ: ದೇವಿಹಳ್ಳಿ–ಹಾಸನ ಟೋಲ್ವೇ ಪ್ರೈವೇಟ್ ಲಿಮಿಟೆಡ್ ವತಿಯಿಂದ ರಾಷ್ಟ್ರೀಯ ಹೆದ್ದಾರಿಯ 75ರಲ್ಲಿ ಸಂಚರಿಸುವ ಲಾರಿ ಸೇರಿದಂತೆ ಭಾರಿ ಸರಕು ವಾಹನಗಳ 300 ಚಾಲಕರಿಗೆ ಉಚಿತವಾಗಿ ಆರೋಗ್ಯ ಮತ್ತು ನೇತ್ರ ಪರೀಕ್ಷೆಯನ್ನು ಬುಧವಾರ ಮತ್ತು ಗುರುವಾರ ಹೋಬಳಿಯ ಕಿರೀಸಾವೆ ಗಡಿಯಲ್ಲಿ ನಡೆಸಲಾಯಿತು.
ಡಾ.ಅನಿತಾ ನೇತೃತ್ವದಲ್ಲಿ ಪ್ರತಿ ಚಾಲಕರ ಮಧಮೇಹ, ರಕ್ತದೊತ್ತಡ ಮತ್ತು ನೇತ್ರ ಪರೀಕ್ಷೆ ಮಾಡಿ, ಅಗತ್ಯ ಇರುವವರಿಗೆ ಸೂಕ್ತ ಸಲಹೆ ಚಿಕಿತ್ಸೆ, ಔಷಧಗಳನ್ನು ನೀಡಲಾಯಿತು. ನೇತ್ರ ಪರೀಕ್ಷೆಯಲ್ಲಿ ದೋಷ ಇದ್ದ ಕೆಲವು ಚಾಲಕರಿಗೆ ಕನ್ನಡಕಗಳನ್ನು ನೀಡಲಾಗಿದೆ. ಹೆಚ್ಚು ಕಣ್ಣಿನ ಸಮಸ್ಯೆ ಇದ್ದು, ಕನ್ನಡಕವನ್ನು ಅವರ ವಿಳಾಸಕ್ಕೆ ಕಳಿಸಲಾಗುವುದು ಎಂದು ಟೋಲ್ವೇ ಸಿಬ್ಬಂದಿ ಸೋಮಶೇಖರ್ ತಿಳಿಸಿದರು.
ಉಚಿತ ಆರೋಗ್ಯ ತಪಾಸಣೆ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಎನ್ಎಚ್ಐನ ಯೋಜನಾ ನಿರ್ದೇಶಕ ಸೈಯದ್ ಅಮಾನುಲ್ಲಾ, ವ್ಯವಸ್ಥಾಪಕ ವಿಪಿನ್ ಶರ್ಮಾ, ದೇವಿಹಳ್ಳಿ–ಹಾಸನ ಟೋಲ್ವೇ ಪ್ರೈವೇಟ್ ಲಿಮಿಟೆಡ್ ನ ಯೋಜನೆಯ ಮುಖ್ಯಸ್ಥ ಸಿ.ಕೆ. ಸುನಿಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.