ADVERTISEMENT

ಹಿರೀಸಾವೆ: 50 ಮಲೆನಾಡು ಗಿಡ್ಡ ಹೋರಿ ವಿತರಣೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 7:58 IST
Last Updated 3 ಡಿಸೆಂಬರ್ 2025, 7:58 IST
<div class="paragraphs"><p>ಮಲೆನಾಡು ಗಿಡ್ಡ ತಳಿಯ ರಾಸು</p></div>

ಮಲೆನಾಡು ಗಿಡ್ಡ ತಳಿಯ ರಾಸು

   

ಹಿರೀಸಾವೆ: ಹೋರಿ ಹಬ್ಬದ ಪ್ರಯುಕ್ತ ಇದೇ ಭಾನುವಾರ ಹೋಬಳಿಯ ಸೋರೆಕಾಯಿಪುರದ ಮಲ್ಲಿಗಮ್ಮ ದೇವಸ್ಥಾನದ ಬಳಿ ರೈತರಿಗೆ ಮಲೆನಾಡು ಗಿಡ್ಡ ತಳಿಯ 50 ಹೋರಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು ಎಂದು ದೇಶೀಯ ತಳಿ ಸಂರಕ್ಷಕ ಶರತ್ ಗೌಡ ಮಂಗಳವಾರ ಇಲ್ಲಿ ತಿಳಿಸಿದರು.

ದೇಸಿ ತಳಿಯನ್ನು ಅಭಿವೃದ್ಧಿ ಪಡಿಸಿ, ರೈತರಿಗೆ  ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ ಮಲೆನಾಡು ಗಿಡ್ಡ ತಳಿ ಸಂರಕ್ಷಣಾ ಮತ್ತು ಸಂವರ್ಧನಾ ಅಭಿಯಾನವನ್ನು ಆರಂಭಿಸಲಾಗಿದೆ. ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಸಂಸ್ಥೆಯ ನಿಯಮದಂತೆ ಎತ್ತುಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ.

ADVERTISEMENT

ಶಾಸಕರಾದ ಸಿ.ಎನ್. ಬಾಲಕೃಷ್ಣ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನದ ಭಕ್ತಿ ಭೂಷಣ್ ದಾಸ್, ಪುನೀತ್ ಕೆರೆಹಳ್ಳಿ, ಜಾನಕೆರೆ ಹೇಮಂತ್, ಪಶು ವೈಧ್ಯಾಧಿಕಾರಿ ಡಾ. ಶ್ರೀಧರ್, ಗೋ ಸಂರಕ್ಷಣೆಯ ಸದಸ್ಯರು ಭಾಗವಹಿಸಲಿದ್ದಾರೆ. ಮಲೆನಾಡು ಗಿಡ್ಡ ಹೋರಿ ಮತ್ತು ಹಸುವಿನ ಬಗ್ಗೆ ಆಸಕ್ತಿ ಇರುವ ರೈತರು ತಮ್ಮನ್ನು ಸಂಪರ್ಕಿಸುವಂತೆ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.