ADVERTISEMENT

ಶಾಸಕ ಪ್ರೀತಂ ಗೌಡ ಸವಾಲು ಸ್ವೀಕರಿಸುವೆ: ಎಚ್‌.ಡಿ.ರೇವಣ್ಣ

ಎಟಿಆರ್ ಪಕ್ಷ ಬಿಡುವ ಮಾತೇ ಇಲ್ಲ, ಗೊಂದಲ ಬಗೆಹರಿಸುವೆ: ಶಾಸಕ ಎಚ್‌.ಡಿ.ರೇವಣ್ಣ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2022, 16:35 IST
Last Updated 15 ಫೆಬ್ರುವರಿ 2022, 16:35 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ‘ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ತಮ್ಮ ಕುಟುಂಬಕ್ಕೆ ಕೆಲವರು (ಬಿಜೆಪಿ ಶಾಸಕ ಪ್ರೀತಂ ಗೌಡ) ನೀಡಿರುವ ಪಂಥಾಹ್ವಾನವನ್ನು ಸವಾಲಾಗಿ ಸ್ವೀಕಾರ ಮಾಡುತ್ತೇವೆ’ ಎಂದು ಶಾಸಕ ಎಚ್.ಡಿ.ರೇವಣ್ಣ ಇಲ್ಲಿ ಹೇಳಿದರು.

‘ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷದ ಕಾರ್ಯ ಕರ್ತರು,ಶಾಸಕರ ಜತೆ ಕೂತು ಚರ್ಚಿಸಿ ತೀರ್ಮಾನಿಸುತ್ತೇವೆ. ಯಡಿಯೂರಪ್ಪ ಮತ್ತವರಮಗ ಹಾಸನದ ಬಗ್ಗೆ ವಿಶೇಷವಾಗಿ ತಲೆ ಕೆಡಿಸಿಕೊಂಡಿದ್ದಾರೆ. ಅವರಿಬ್ಬರೂ ಬಂದು ಇಲ್ಲೇ ಠಿಕಾಣಿ ಹಾಕಲಿ. ಎಲ್ಲವನ್ನೂ ಎದುರಿಸುವ ಶಕ್ತಿ ಕಾರ್ಯಕರ್ತರಿಗೆಇದೆ. ಮುಂದಿನ ಚುನಾವಣೆಯನ್ನೂ ಸವಾಲಾಗಿ ಸ್ವೀಕರಿಸಿ, ಎದುರಿಸುತ್ತೇವೆ’ ಎಂದು ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಪಕ್ಷ ಬಿಡುವ ಮಾತೇ ಇಲ್ಲ.ಅವರಿಗೆ ಕೆಲವರು ತೊಂದರೆ ಕೊಟ್ಟಿರಬಹುದು. ಅದನ್ನುಸರಿಪಡಿಸಲಾಗುವುದು. ಅವ ರನ್ನು ಬಿಟ್ಟುಕೊಡಲು ತಯಾರಿಲ್ಲ. ಅವರಿಗೆ ಏನೇ ನೋವಾಗಿದ್ದರೂ ಸರಿಪಡಿಸುವೆ’ ಎಂದರು.

ADVERTISEMENT

‘ಈ ಹಿಂದೆ ರೇವಣ್ಣ ಅವರದ್ದು ಸರ್ವಾಧಿಕಾರಿ ಧೋರಣೆ ಎಂದಿದ್ದರು. ನೇರ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ. ಯಾವುದೇ ವಿಷಯವನ್ನು ನೇರವಾಗಿ ಹೇಳುತ್ತಾರೆ.ನನ್ನ ತಪ್ಪಿದ್ದರೂ ಸರಿಪಡಿಸಿ ಕೊಳ್ಳುತ್ತೇನೆ’ ಎಂದು ಶಾಸಕರು ಹೇಳಿದರು.

‘ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್ ತೊರೆ ಯುತ್ತಾರೆಎಂದು ಕೆಲ ಕಾಂಗ್ರೆಸ್ ಮುಖಂಡರು ಅಪ ಪ್ರಚಾರ ಮಾಡು ತ್ತಾರೆ. ಆದರೆ,ಅವರು ಕೆಲವೊಮ್ಮೆ ಸಂದರ್ಭಕ್ಕೆ ತಕ್ಕಂತೆ ನಾಯಕರನ್ನು ಹೊಗಳಿದ್ದಾರೆ. ಅವರ ಕ್ಷೇತ್ರಕ್ಕೆ ಯಾರೇ ಬಂದರೂ ಗೌರವ ಕೊಡಬೇಕು. ಆ ರೀತಿನಡೆದುಕೊಂಡಿದ್ದಾರೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಒಬ್ಬ ಮುಖ್ಯಮಂತ್ರಿ ಬಡವರ ಬಗ್ಗೆ ಕರುಣೆ ತೋರಿಸಬೇಕು. ಸುಳ್ಳುಹೇಳಿಕೊಂಡು ರಾಜಕೀಯ ಮಾಡಬಾರದು. ಇದು ಹೆಚ್ಚು ದಿನ ನಡೆಯುವುದಿಲ್ಲ’ ಎಂದು ಕಿಡಿಕಾರಿದರು.

‘ರೈತರು ಆಭರಣ ಅಡವಿಟ್ಟು ಸಾಲ ತಂದು ಬೆಳೆ ಬೆಳೆದಿರುತ್ತಾರೆ.ನೂರಾರು ಕೋಟಿ ವೆಚ್ಚದಲ್ಲಿ ಕಟ್ಟಿದ ಹಿಮ್ಸ್ ಆಸ್ಪತ್ರೆಯಲ್ಲೀಗ ಹೊರಗುತ್ತಿಗೆದಂಧೆ ನಡೆಯುತ್ತಿದೆ. ಇಂತಹ ಘನ ಕಾರ್ಯ ಮಾಡಲು ನಾವು ಆಸ್ಪತ್ರೆ ಕಟ್ಟಬೇಕಿತ್ತಾ? ಮೆಡಿಕಲ್ ಕಾಲೇಜಿನಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಬಡ ರೈತನ ಕಾಲಿಗೆವೈದ್ಯರು ಸರಿಯಾದ ಚಿಕಿತ್ಸೆ ನೀಡದೆ, ಖಾಸಗಿ ಆಸ್ಪತ್ರೆಗೆ ಕಳುಹಿಸಿದರು. ಅಲ್ಲಿಆತನ ಅರ್ಧ ಕಾಲು ತೆಗೆಯಲಾಗಿದೆ. ₹ 10 ಲಕ್ಷ ಸಹ ಖರ್ಚಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಆಗದಿದ್ದರೆ ಬಾಗಿಲು ಮುಚ್ಚಿ’ ಎಂದುಗುಡುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.