ADVERTISEMENT

ಶಾಂತಿ ಕದಡಲು ಬಂದವರ ಹುಟ್ಟಡಗಿಸುವ ಶಕ್ತಿ ಭಾರತಕ್ಕಿದೆ; ಶಾಸಕ ಎಚ್.ಕೆ.ಸುರೇಶ್

​ಪ್ರಜಾವಾಣಿ ವಾರ್ತೆ
Published 8 ಮೇ 2025, 12:18 IST
Last Updated 8 ಮೇ 2025, 12:18 IST
ಬೇಲೂರಿನ ಚನ್ನಕೇಶವ ದೇಗುಲದಲ್ಲಿ ಕೇಂದ್ರ ಸರ್ಕಾರದ ಆದೇಶದನ್ವಯ ನಡೆದ ವಿಶೇಷ ಪೂಜೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಪಾಲ್ಗೊಂಡಿದ್ದರು
ಬೇಲೂರಿನ ಚನ್ನಕೇಶವ ದೇಗುಲದಲ್ಲಿ ಕೇಂದ್ರ ಸರ್ಕಾರದ ಆದೇಶದನ್ವಯ ನಡೆದ ವಿಶೇಷ ಪೂಜೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಪಾಲ್ಗೊಂಡಿದ್ದರು   

ಬೇಲೂರು: 'ಭಾರತ ಶಾಂತಿಪ್ರಿಯವಾದ ದೇಶವಾಗಿದ್ದು, ಶಾಂತಿ ಕದಡಲು ಬಂದವರ ಹುಟ್ಟನ್ನು ಅಡಗಿಸುವ ಶಕ್ತಿ ಹೊಂದಿದೆ’ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ಕೇಂದ್ರ ಸರ್ಕಾರದ ಆದೇಶದನ್ವಯ ಇಲ್ಲಿನ ಚನ್ನಕೇಶವ ದೇಗುಲದಲ್ಲಿ ಗುರುವಾರ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಭಾರತ ಪರಮ ಪುಣ್ಯ ಪವಿತ್ರಭೂಮಿ, ಸಾಧು, ಸಂತರು, ಋಷಿಮುನಿಗಳ ತಪೋವನವಾಗಿದ್ದು, ಇಂತಹ ನೆಲದಲ್ಲಿ ಭಯೋತ್ಪದನೆಗೆ ಮುಂದಾಗಿರುವುದು ಖಂಡನೀಯ. ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ದೇಶದ ಭದ್ರತೆಗೆ ಹೆಚ್ಚಿನ ಗಮನ ನೀಡಿದ್ದು, ಕೆಣಕಿ ಬದವರಿಗೆ ಬುದ್ದಿಕಲಿಸಲು ಸೈನ್ಯವನ್ನು ಬಲಪಡಿಸಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ ಮಹಿಳೆಯರ ಪತಿಯರನ್ನು ಕೊಂದು ಕುಂಕುಮ ಅಳಿಸಿದ ಕಾರಣ, ಸಿಂಧೂರ ಎಂಬ ಹಸರಿನಡಿಯಲ್ಲಿ ಕಾರ್ಯಚರಣೆ ನಡೆಸಿ ಉಗ್ರರನ್ನು ಕೊಲ್ಲಲಾಗಿದೆ’ ಎಂದರು.

ADVERTISEMENT

‘148 ಕೋಟಿ ಜನಕ್ಕೆ ಶಾಂತಿ, ನೆಮ್ಮದಿ ನೀಡುತ್ತಿರುವ ಮೋದಿಯವರು, ಪ್ರಜೆಗಳ ನೆಮ್ಮದಿ, ಸೈನಿಕರ ಆತ್ಮಸ್ಥೈರ್ಯಕ್ಕಾಗಿ ಭಗವಂತನಲ್ಲಿ ಪ್ರಾರ್ಥಿಸಲು ಇಂದು ದೇಶದ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ತಿಳಿಸಿದ್ದು, ಈ ನಿಟ್ಟಿನಲ್ಲಿ ಚನ್ನಕೇಶವನ್ನ ಪೂಜೆ ನಡೆದಿದ್ದು, ನಾಡಿನ, ದೇಶದ ಒಳಿತಿಗಾಗಿ ಪ್ರಾರ್ಥಿಸಿದ್ದೇನೆ’ ಎಂದರು.

ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ಶ್ರೀನಿವಾಸ ಭಟ್, ನರಸಿಂಹಭಟ್ ಸೇರಿದಂತೆ ದೇಗುಲದ ಆರ್ಚಕರು ಹಾಗೂ ಬಿಜೆಪಿ ಮುಖಂಡರಾದ ಯೋಗೀಶ್, ಟಿ.ವೈ.ನೀಲಕಂಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.