ಅರಸೀಕೆರೆ: ಇಲ್ಲಿನ ಅನಂತ ಪಿಯು ಕಾಲೇಜಿನ ದ್ವೀತಿಯ ವರ್ಷದ ವಿದ್ಯಾರ್ಥಿನಿ ಆರ್. ಬೃಂದಾ ರಚಿಸಿರುವ ‘ಇನ್ಫಿನಿಟಿ’ ಕಾದಂಬರಿಯನ್ನು ಗುರುವಾರ ಬಿಡುಗಡೆಗೊಳಿಸಲಾಯಿತು.
ಪುಸ್ತಕ ಓದುವುದರಲ್ಲಿ ಆಸಕ್ತರಾಗಿರುವ ಬೃಂದಾ ಕಾದಂಬರಿ ಪ್ರಕಟಿಸುವ ಕನಸು ಕಾಣುತ್ತಿದ್ದರು. ಪುಸ್ತಕ ಬಿಡುಗಡೆ ಮಾಡುವ ಮೂಲಕ ಕನಸ್ಸನ್ನು ನನಸು ಮಾಡಿಕೊಂಡಿದ್ದಾರೆ.
'ಇನ್ಫಿನಿಟಿ' ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದ್ದು, ಇದು ಬಾಂಧವಿ ಎಂಬ ಹುಡುಗಿಯ ಸುತ್ತ ಹೆಣೆದ ಕಥೆಯಾಗಿದ್ದು, ಇದೊಂದು ರಹಸ್ಯ ಮತ್ತು ಆಘಾತಕಾರಿ ಸತ್ಯಗಳಿಂದ ತುಂಬಿದ ಕಾದಂಬರಿಯಾಗಿದೆ. ಇದು ಕಾಲ್ಪನಿಕ ಕಾದಂಬರಿಯಾಗದೇ ಪೋಷಕರಿಗೆ ಮತ್ತು ಶಿಕ್ಷಣ ವ್ಯವಸ್ಥೆಗಳಿಗೆ ಸಂದೇಶವನ್ನೂ ಒಳಗೊಂಡಿದೆ’ ಎಂದು ಬೃಂದಾ ತಿಳಿಸಿದರು.
ಅನಂತ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಅನಂತಕುಮಾರ್, ಪ್ರಾಂಶುಪಾಲ ಸುರೇಶ್ ಕುಮಾರ್, ಮುಖ್ಯ ಅತಿಥಿ ಸಿ.ಕೆ ಮಂಜುನಾಥ, ಸುಭಾಷ್ ಅವರು ಕಾದಂಬರಿ ಬಿಡುಗಡೆಗೊಳಿಸಿದರು. ಪೋಷಕರು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹಾಜರಿದ್ದರು. ತಾಲ್ಲೂಕಿನ ಬೆಟ್ಟದಪುರ ಲಕ್ಷ್ಮೀ ರಂಗನಾಥ ದೇವಸ್ಥಾನ ಧರ್ಮದರ್ಶಿ ಸತ್ಯನಾರಾಯಣ ಮತ್ತು ವಿಜಯಲಕ್ಷ್ಮಿ ಅವರ ಮೊಮ್ಮಗಳಾದ ಬೃಂದಾ ಆರ್.ಶರ್ಮ ಅವರು ರಾಘವೇಂದ್ರ ಮತ್ತು ಸುಮಾ ರಾಘವೇಂದ್ರ ಅವರ ಪುತ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.