ADVERTISEMENT

ಅಂತರರಾಷ್ಟ್ರೀಯ ಯೋಗಾಸನ: ಅರ್ಪಿತಾ ಸಾಧನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 1:39 IST
Last Updated 16 ಅಕ್ಟೋಬರ್ 2025, 1:39 IST
ಟ್ರೋಫಿಯೊಂದಿಗೆ ಅರ್ಪಿತಾ ಜಿ.ಕೆ 
ಟ್ರೋಫಿಯೊಂದಿಗೆ ಅರ್ಪಿತಾ ಜಿ.ಕೆ    

ಶ್ರವಣಬೆಳಗೊಳ: ಅಕ್ಟೋಬರ್ 14 ಮತ್ತು 15ರಂದು ಮಲೇಷ್ಯಾದಲ್ಲಿ ಜರುಗಿದ ಏಷ್ಯಾ ಪ್ಯಾನಿಕ್ ಅಂತರ ರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಶ್ರವಣಬೆಳಗೊಳ ಕೃಷಿ ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ಜಿ.ಕೆ.ಅರ್ಪಿತಾ 3ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.

ಇವರು ಅಂತರ ರಾಷ್ಟ್ರೀಯ ಮಟ್ಟದ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ರಾಜ್ಯ ಮತ್ತು ರಾಷ್ಟ್ರದ ಗೌರವವನ್ನು ಹೆಚ್ಚಿಸಿದ್ದಾರೆ ಎಂದು ಕೃಷಿ ಅಧಿಕಾರಿ ಜಿ.ವಿ.ದಿನೇಶ್ ತಿಳಿಸಿದ್ದಾರೆ. ಯೋಗಾಸನ ಸಾಧನೆಗೆ ಶಿಕ್ಷಕಿ ರೇಖಾ ರಾಣಿ ಎಸ್.ಆರ್. ಮತ್ತು ಕೃಷಿ ಇಲಾಖೆಯ ಅಧಿಕಾರಿಗಳ ಸಹಕಾರ ಕಾರಣ ಎಂದು  ಅರ್ಪಿತಾ ಜಿ.ಕೆ ಪ್ರತಿಕ್ರಿಯೆವ್ಯಕ್ತಪಡಿಸಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ 3ನೇ ಸ್ಥಾನ ಪಡೆದು ಪ್ರಶಸ್ತಿಯೊಂಗೆ
ಅಂತರರಾಷ್ಟ್ರೀಯ ಮಟ್ಟದಲ್ಲಿ 3ನೇ ಸ್ಥಾನ ಪಡೆದು ಪ್ರಶಸ್ತಿಯೊಂಗೆ
ಅಂತರ ರಾಷ್ಟ್ರೀಯ ಮಟ್ಟದಲ್ಲಿ ಯೋಗಾಸನ ಸ್ಪರ್ಧೆಯಲ್ಲಿ ಭಾರತದ ಧ್ವಜವನ್ನು ಪ್ರದರ್ಶಿಸುತ್ತಿರುವ ಜಿ.ಕೆ ಅರ್ಪಿತಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT