ADVERTISEMENT

ಹಳೇಬೀಡು: ಹೊಯ್ಸಳೇಶ್ವರ ದೇಗುಲಕ್ಕೆ ಗಾಲಿ ಜನಾರ್ದನರೆಡ್ಡಿ ಭೇಟಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2023, 15:17 IST
Last Updated 15 ಜೂನ್ 2023, 15:17 IST
ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯಕ್ಕೆ ಗುರುವಾರ ಆಗಮಿಸಿದ್ದ ಕಲ್ಯಾಣ ಕರ್ನಾಟಕ ಪಕ್ಷದ ಅಧ್ಯಕ್ಷ ಹಾಗೂ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರನ್ನು ಸ್ಥಳಿಯರು ಅಭಿನಂದಿಸಿದರು. ಗ್ರಾಮ ಪಂಚಾಯಿತಿ ಸದಸ್ಯ ನಿಂಗಪ್ಪ, ಮಾಜಿ ಅಧ್ಯಕ್ಷ ಕೃಷ್ಣ, ಮುಖಂಡರಾದ ಎಚ್.ಬಿ.ರಮೇಶ್, ವಿನಯ್, ಭೈರೇಶ್, ಪಯಾಜ್, ಹುಲಿಕೆರೆ ಕುಮಾರ್ ಇದ್ದರು.

ಹಳೇಬೀಡು: ಹೊಯ್ಸಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹಳೇಬೀಡು ಜನತೆ ತೋರಿಸಿದ ಅಭಿಮಾನ ನಮಗೆ ಸಂತಸ ನೀಡಿತು ಎಂದು ಕರ್ನಾಟಕ ಕಲ್ಯಾಣ ಪಕ್ಷದ ಅಧ್ಯಕ್ಷ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ಗುರುವಾರ ಅವರು ಕುಟುಂಬದೊಂದಿಗೆ ಹೊಯ್ಸಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದ ಮಾತನಾಡಿದರು.

 ಹಳೇಬೀಡಿನ ಶಿಲ್ಪಗಳು ಮನಸ್ಸಿಗೆ ಹಿತ ನೀಡಿದವು. ಶಿಲ್ಪ ವೀಕ್ಷಣೆ ಸಂರ್ಭದಲ್ಲಿ ಹಳೇಬೀಡಿನ ಜನತೆ ನಮ್ಮೊಂದಿಗೆ ಕಳೆದ ಕ್ಷಣಗಳನ್ನು ಮರೆಯುವಂತಿಲ್ಲ. ಹಳೇಬೀಡು ಜನರ ಅಭಿಮಾನದ ನುಡಿಗಳು ಮನಸ್ಸಿನಲ್ಲಿ ನಿಂತಿವೆ ಎಂದರು.

ADVERTISEMENT

30 ನಿಮಿಷಕ್ಕೂ ಹೆಚ್ಚು ಸಮಯ ಜನಾರ್ದನರೆಡ್ಡಿ ಪ್ರವಾಸೊಧ್ಯಮ ಅಭಿವೃದ್ಧಿ ಹಾಗೂ ಸ್ಥಳೀಯರ ಸಹಬಾಗಿತ್ವ ಕುರಿತು ಚರ್ಚಿಸಿದರು. ಪ್ರವಾಸೋದ್ಯಮದಲ್ಲಿ ಸ್ವಾವಲಂಬಿ ಜೀವನ ನಡೆಸುವ ಕುರಿತು ಸ್ಥಳೀಯರಿಗೆ ತಿಳಿವಳಿಕೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ನಿಂಗಪ್ಪ, ಮಾಜಿ ಅಧ್ಯಕ್ಷ ಕೃಷ್ಣ, ಮುಖಂಡರಾದ ಎಚ್.ಬಿ.ರಮೇಶ್, ವಿನಯ್, ಭೈರೇಶ್, ಪಯಾಜ್, ಹುಲಿಕೆರೆ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.