
ನುಗ್ಗೇಹಳ್ಳಿ: ಕರ್ನಾಟಕದಲ್ಲಿ ಕನ್ನಡ ನಾಡು ನುಡಿ ಭಾಷೆ ಉಳಿಯಲು ಆಟೊ ಚಾಲಕರ ಕನ್ನಡ ಅಭಿಮಾನವೂ ಕಾರಣ ಎಂದು ನುಗ್ಗೇಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ಭರತ್ ರೆಡ್ಡಿ ಹೇಳಿದರು.
ಹೋಬಳಿ ಕೇಂದ್ರದ ಶ್ರೀ ನುಗ್ಗೇಳ್ಳಮ್ಮ ಗ್ರಾಮ ದೇವತೆ ಆಟೊ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ 4ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
‘ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಇತ್ತೀಚಿನ ವರ್ಷಗಳಲ್ಲಿ ಬೇರೆ ರಾಜ್ಯಗಳ ಅನ್ಯಭಾಷೆಕಾರ ವಲಸೆಯಿಂದ ಕನ್ನಡ ಭಾಷೆಗೆ ತೊಡಕ್ಕಾಗುತ್ತಿದೆ’ ಎಂದರು.
ಸಮುದಾಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರವೀಣ್ ಮಾತನಾಡಿ ಕನ್ನಡ ನಾಡು ನುಡಿ ಭಾಷೆಯ ಮೇಲಿರುವ ಆಟೊ ಚಾಲಕರ ಭಾಷಾಭಿಮಾನವನ್ನು ನಾವೆಲ್ಲರೂ ಗೌರವಿಸಬೇಕಾಗಿದೆ ಎಂದರು.
ನಾಲ್ಕನೇ ವರ್ಷದ ಕನ್ನಡ ರಾಜ್ಯೋತ್ಸವ ಅಂಗವಾಗಿ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಕನ್ನಡ ಬಾವುಟದೊಂದಿಗೆ ಸಿಂಗಾರಗೊಂಡಿದ್ದ ಆಟೊ ಮೆರವಣಿಗೆ ಚಾಲಕರಿಂದ ನಡೆಯಿತು. ಜೊತೆಗೆ ಸಂಘದ ವತಿಯಿಂದ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಯಿತು.
ಸಂಘದ ಪದಾಧಿಕಾರಿಗಳಾದ ಲೋಕೇಶ್, ಆದಿಲ್ ಪಾಶ, ಕೆಂಪರಾಜ್, ರಘುನಾಥ್, ಜಬಿ, ಶಿವಕುಮಾರ್, ಸ್ವಾಮಿ, ರಫೀಕ್, ಶಬರಿ,ಸತೀಶ್ ಗೌಡ, ಮನೋಜ್, ಶ್ರೀನಿವಾಸ್, ತೇಜಸ್, ರಫೀಕ್ ಇಸ್ಮೈಲ್, ಶೋಯಬ್ ಪಾಷಾ, ಆನಂದ, ಕೃಷ್ಣಮೂರ್ತಿ, ಪುನೀತ್, ಧರಣೀಶ , ಅಭಿಲಾಶ್ ಮಹೇಶ್, ಜಾವೇದ್ ಪಾಷ, ಜಯರಾಮ, ನಾಗೇಶ್, ಬಸವರಾಜ್, ಇಂಚರ, ಸೃಜನ್, ರೋಹಿತ್, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.