ಬೇಲೂರು: ಈ ಬಾರಿಯ ಕೆಂಪೇಗೌಡ ಜಯಂತಿಯನ್ನು ಜೂನ್ 30 ರಂದು ಅದ್ದೂರಿಯಾಗಿ ಆಚರಿಸಲು ಸಮಾಜದ ಮುಖಂಡರ ಸಹಕಾರ ನೀಡಬೇಕು ಎಂದು ಶಾಸಕ ಎಚ್.ಕೆ. ಸುರೇಶ್ ಹೇಳಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸಮುದಾಯದ ಸಭೆಯಲ್ಲಿ ಮಾತನಾಡಿದ ಅವರು, 15 ವರ್ಷಗಳಿಂದ ಒಕ್ಕಲಿಗರ ಯುವ ವೇದಿಕೆ ಮುಂದಾಳತ್ವದಲ್ಲಿ ಸಮುದಾಯದ ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಉತ್ತಮವಾಗಿ ನಡೆದುಕೊಂಡು ಬರುತ್ತಿದೆ ಎಂದರು.
ಈ ಬಾರಿ ಜಯಂತಿಯನ್ನು ಮನೆಯ ಹಬ್ಬದ ರೀತಿಯಲ್ಲಿ ಪ್ರತಿಯೊಬ್ಬ ಒಕ್ಕಲಿಗ ಸಮುದಾಯದವರು ಒಗ್ಗಟ್ಟಿನಿಂದ ಆಚರಿಸಬೇಕು. ಸಬೆಯಲ್ಲಿ ಹಿರಿಯರ ಮಾರ್ಗದರ್ಶನದಂತೆ ಕೈಗೊಳ್ಳುವ ತೀರ್ಮಾನದಂತೆ ಸಂಪೂರ್ಣ ಸಹಕಾರ ನೀಡಿ, ಸೇವಕನಾಗಿ ನಿಭಾಯಿಸಲು ಸಿದ್ಧ ಎಂದ ಅವರು, ಶಂಭುನಾಥ ಸ್ವಾಮೀಜಿ ನೇತೃತ್ವದಲ್ಲಿ ಕೆಂಪೇಗೌಡ ಜಯಂತಿ ಆಚರಿಸೋಣ ಎಂದರು.
ಕೆಂಪೇಗೌಡ ಸೇವಾ ಸಮಿತಿ ಅಧ್ಯಕ್ಷ ಎಂ.ಎ. ನಾಗರಾಜ್ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಡಿ. ಚಂದ್ರೇಗೌಡ ಮಾತನಾಡಿ, ಹಿಂದಿನಿಂದಲೂ ಯುವಕರ ತಂಡ ಈ ಜಯಂತಿ ಆಚರಿಸಿಕೊಂಡು ಬಂದಿದ್ದು, ಒಕ್ಕಲಿಗರ ಸಮುದಾಯ ಎಲ್ಲರೂ ಸಹಕಾರ ನೀಡಿದ್ದಾರೆ. ಯಾವುದೇ ಗೊಂದಲಗಳಿಗೆ ಅವಕಾಶ ನೀಡದಂತೆ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.
ಸಮಾಜದ ಗಿರೀಶ್ ಸ್ವಾಮಿ ಗೌಡ, ರಾಜೇಗೌಡ, ನಿಶಾಂತ್, ಸೇರಿದಂತೆ ಇತರರು ಸಲಹೆ ಸೂಚನೆ ನೀಡಿದರು. ಒಕ್ಕಲಿಗರ ಯುವ ವೇಧಿಕೆ ಅಧ್ಯಕ್ಷ ಗಿರೀಶ್, ಕೆಂಪೇಗೌಡ ಸೇವಾ ಸಮಿತಿ ಅದ್ಯಕ್ಷ ಬಸವರಾಜು, ಮಾಜಿ ಮುಖ್ಯಾಧಿಕಾರಿ ಎಸ್.ಡಿ. ಮಂಜುನಾಥ್, ಮಹಿಳಾ ಅಧ್ಯಕ್ಷೆ ಭಾರತಿಗೌಡ, ಗೌರವಾಧ್ಯಕ್ಷ ಪೃಥ್ವಿ, ಉಪಾಧ್ಯಕ್ಷ ಎಂ.ಡಿ. ದಿನೇಶ್, ಅಬಿಗೌಡ, ಗಣೇಶ್, ದೀಪು, ಡಾ.ರಘುಚರಣ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಮಾ.ನ. ಮಂಜೇಗೌಡ, ಲೊಹಿತ್, ಖಜಾಂಚಿ ನಾರಾಯಣ್, ಪ್ರಧಾನ ಕಾರ್ಯದರ್ಶಿ ಗಣೇಶ್, ಸತೀಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.