ಸಾವು (ಪ್ರಾತಿನಿಧಿಕ ಚಿತ್ರ)
ಕೊಣನೂರು: ಬೈಕ್ ಸವಾರನನ್ನು ಉಳಿಸಲು ಹೋಗಿ ಕಾರ್‌ನಲ್ಲಿದ್ದ ಇಬ್ಬರು ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಕೊಣನೂರಿನ ದರ್ಶನ್ (25) ಮತ್ತು ಕಬ್ಬಳಿಗೆರೆಯ ರಂಗನಾಥ ಪ್ರಸಾದ್ ಕೆ. (25) ಮೃತರು. ಕೊಣನೂರು-ಕೇರಳಾಪುರ ಮುಖ್ಯರಸ್ತೆಯಲ್ಲಿ ಶನಿವಾರ ರಾತ್ರಿ ವೇಳೆ ಆಕಾಶ್ ಕೆ.ಆರ್. ಕಾರು ಚಾಲನೆ ಮಾಡಿಕೊಂಡು ಕೇರಳಾಪುರ ಕಡೆಗೆ ಹೋಗುವ ವೇಳೆ ಹಿಂಬದಿಯಿಂದ ಬಂದ ಬೈಕ್ ಕಾರಿನ ಡೋರ್‌ಗೆ ತಗುಲಿದ್ದು, ಕಾರನ್ನು ಪಕ್ಕಕ್ಕೆ ಚಲಿಸಲು ಪ್ರಯತ್ನಿಸಿದಾಗ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಅಕಾಶ್ ಅವರ ಸಹೋದರ ದರ್ಶನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರ ಸ್ನೇಹಿತ ರಂಗನಾಥ ಪ್ರಸಾದ್.ಕೆ ಹಾಸನದ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.